Bengaluru

ಚೆನ್ನೈ-ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌; ನ.11ಕ್ಕೆ ಮೋದಿ ಚಾಲನೆ

ಬೆಂಗಳೂರು; ರಾಜ್ಯಕ್ಕೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬರೋದು ಖಾತ್ರಿಯಾಗಿದೆ. ಇದೇ 11 ರಿಂದ ಚೆನ್ನೈ-ಮೈಸೂರು ಮಾರ್ಗವಾಗಿ ಈ ರೈಲು ಸಂಚಾರ ಮಾಡಲಿದ್ದು, ನವೆಂಬರ್‌ 11 ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ. ದೇಶದ ಐದನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇದಾಗಿದೆ. ಈಗಾಗಲೇ ನಾಲ್ಕು ರೈಲು ದೇಶದ ವಿವಿಧ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ.

ನಾಲ್ಕೂ ರೈಲುಗಳು ಉತ್ತರ ಭಾರತದಲ್ಲಿ ಸಂಚಾರ ನಡೆಸುತ್ತಿವೆ. ಚೆನ್ನೈ-ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದಕ್ಷಿಣ ಭಾರತದ ಮೊದಲ ರೈಲಾಗಲಿದೆ. 16 ಬೋಗಿಗಳಿರುವ ಈ ರೈಲಿನಲ್ಲಿ ಮೈಸೂರು-ಚೆನ್ನೈ ಪ್ರಯಾಣಕ್ಕೆ ಎಕಾನಮಿ ಕ್ಲಾಸ್‌ ದರ 921 ರೂಪಾಯಿ ನಿಗದಿ ಮಾಡಲಾಗಿದೆ. ಮೈಸೂರು-ಚೆನ್ನೈ ಪ್ರಯಾಣ ಸಮಯ ಈ ರೈಲಿನಲ್ಲಿ 6 ಗಂಟೆ 40 ನಿಮಿಷ ಹಿಡಿಯಲಿದೆ ಎಂದು ಹೇಳಲಾಗಿದೆ.

ಮೈಸೂರಿನಿಂದ ಚೆನ್ನೈಗೆ ಎಕಾನಮಿ ಕ್ಲಾಸ್‌ ಪ್ರಯಾಣಕ್ಕೆ 921 ರೂಪಾಯಿ ಆದರೆ, ಎಕ್ಸಿಕ್ಯುಟಿವ್ ಕ್ಲಾಸ್‌ ಪ್ರಯಾಣ ದರ 1,880 ರೂಪಾಯಿ ಎಂದು ತಿಳಿದುಬಂದಿದೆ. ಮೈಸೂರಿನಿಂದ ಬೆಂಗಳೂರಿಗೆ ಎಕಾನಮಿ ಕ್ಲಾಸ್ ದರ 368 ರೂಪಾಯಿ ಹಾಗೂ ಎಕ್ಸಿಕ್ಯುಟಿವ್ 768 ರೂಪಾಯಿ ನಿಗದಿ ಮಾಡಲಾಗಿದೆ.

Share Post