ಎಂಜಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಬೆಂಗಳೂರು; ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅಧ್ಯಯನದ ವೇಳೆಗೆ ಉದ್ಯೋಗ ಆಧಾರಿತ ತರಬೇತಿ ನೀಡುವ ಮೂಲಕ ಕೌಶಲ್ಯವನ್ನು ಹೆಚ್ಚಿಸುವ ನೆಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು, ಖಾಸಗಿ ಕಾಲೇಜುಗಳ ದೃಷ್ಟಿಯಲ್ಲಿ ಸೌಲಭ್ಯಗಳ ಕೊರತೆ ಹೊಂದಿವೆ, ಮತ್ತು ಉದ್ಯೋಗಾವಕಾಶಗಳ ಕೊರತೆ ಹೊಂದಿವೆ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅವುಗಳನ್ನು ಪೂರೈಸುವ ದೃಷ್ಟಿಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಉದ್ಯೋಗ ಆಧಾರಿತ ಕೌಶಲ್ಯ ಶಿಕ್ಷಣವನ್ನು ನೀಡಲು ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ .ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಎಂಟು ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇಂದು ಬಿಡದಿ ಟೊಯೋಟ ಕಿರ್ಲೋಸ್ಕರ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡ ನಂತರ ರಾಮನಗರ ಹಾಗೂ ಬಿಡದಿಯ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭ್ಯಾಸದ ವೇಳೆಗೆ ಟೊಯೋಟ ಕಂಪನಿಗಳಿಗೆ ಭೇಟಿ ನೀಡಿ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಬಗ್ಗೆ ತರಬೇತು ಪಡೆಯಲಿದ್ದಾರೆ.
ಇದೇ ರೀತಿ ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಮತ್ತು ಪೊಲಿಟೆಕ್ನಿಕ್ ಕಾಲೇಜ್ಗಳಲ್ಲಿ ಟೊಯೋಟ ಮುಂದಿನ ದಿನಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದರು. ನ್ಯೂಜಿಲೆಂಡ್ ನ ಎಂಟು ವಿಶ್ವವಿದ್ಯಾಲಯ ಗಳೊಂದಿಗೆ ಇತ್ತೀಚೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ರಾಜ್ಯದ ಸುಮಾರು 10 ವಿಶ್ವವಿದ್ಯಾಲಯಗಳು ವಿವಿಧ ಕೋರ್ಸುಗಳಿಗೆ ಸಂಬಂಧಪಟ್ಟಂತೆ ಸಂಶೋಧನೆ ತರಬೇತಿ ಹಾಗೂ ಅಧ್ಯಯನ ಮೂರು ವಿಭಾಗಗಳಲ್ಲಿ ನ್ಯೂಜಿಲೆಂಡ್ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕ ಸಾಧಿಸಲಿವೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಲಿವೆ ಎಂದರು.
ಸಾಮಾನ್ಯ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಕೌಶಲ್ಯವನ್ನು ಸೃಷ್ಟಿಸುವ ಸಂಬಂಧ ಪಟ್ಟಂತೆ ಕ್ರಿಸ್ಪ Centre for research in scheme s and policy s ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು ಒಡಂಬಡಿಕೆಗೆ ಬರಲಾಗುತ್ತಿದೆ. ಈ ಮೂಲಕ ಸಾಮಾನ್ಯ ಬಿಎ, ಬಿಎಸ್ಸಿ ,ಬಿಬಿಎ, ಬಿಕಾಂ ವಿದ್ಯಾರ್ಥಿಗಳು ಕೂಡ ಉದ್ಯೋಗಾವಕಾಶವನ್ನು ಪಡೆಯುವ ಸಂಬಂಧ ಪಟ್ಟಂತೆ ತರಬೇತಿ ಮತ್ತು ಅಪ್ರೆಂಟಿಸ್ ಅವಕಾಶವನ್ನು ವಿವಿಧ ಕ್ಷೇತ್ರಗಳಲ್ಲಿ ಕಲ್ಪಿಸಿಕೊಡಲಾಗುತ್ತದೆ ಎಂದರು . ಈ ಎಲ್ಲಾ ಒಡಂಬಡಿಕೆಗಳಲ್ಲಿ ಸರ್ಕಾರದ ಹಣಕಾಸಿನ ವ್ಯವಹಾರ ಕಿಂಚಿತ್ತು ಇರುವುದಿಲ್ಲ ಇವೆಲ್ಲವೂ ಸಾಮಾಜಿಕ ಕಳಕಳಿಯ ಮೇಲೆ ಆಯಾ ಸಂಸ್ಥೆಗಳು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಯೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳಾಗಿವೆ ಎಂದು ಪ್ರಶ್ನೆ ಒಂದಕ್ಕೆ ಸ್ಪಷ್ಟಪಡಿಸಿದರು.