CrimeDistricts

ಆಯೋಧ್ಯೆಯಿಂದ ವಾಪಸ್ಸಾಗುತ್ತಿದ್ದವರಿಗೆ ಬೆದರಿಕೆ; ರೈಲಿಗೆ ಬೆಂಕಿ ಹಚ್ಚುವ ಧಮ್ಕಿ!

ಬಳ್ಳಾರಿ(ಕರ್ನಾಟಕ); ಕರ್ನಾಟಕದಿಂದ ಅಯೋಧ್ಯೆಗೆ ಹೋಗಿ ವಾಪಸ್ಸಾಗುತ್ತಿದ್ದವರಿಗೆ ಅನ್ಯಕೋಮಿನ ಮೂವರು ಯುವಕರು ಧಲ್ಕಿ ಹಾಕಿರುವ ಘಟನೆ ಕಳೆದ ರಾತ್ರಿ ನಡೆದಿದೆ. ರೈಲಿನಲ್ಲಿ ಶ್ರೀರಾಮ ಭಜನೆ ಮಾಡುತ್ತಾ ಕುಳಿತಿದ್ದಾಗ ಮೂವರು ಅನ್ಯಕೋಮಿನ ಮೂವರು ಯುವಕರು ಆ ಭೋಗಿ ಹತ್ತಿದ್ದು, ಸುಖಾಸುಮ್ಮನೆ ವಾಗ್ವಾದಕ್ಕಿಳಿದಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಮೂವರೂ ವ್ಯಕ್ತಿಗಳು ಮಾತಿನ ಭರದಲ್ಲಿ  ಶ್ರೀರಾಮ ಭಕ್ತರಿದ್ದ ಭೋಗಿಗೆ ಬೆಂಕಿ ಹಚ್ಚುವುದಾಗಿಯೂ ಧಮ್ಕಿ ಹಾಕಿದ್ದಾರೆ. ಇದರಿಂದ ಕೆರಳಿದ ಶ್ರೀರಾಮ ಭಕ್ತರು ವಿಜಯನಗರ ಜಿಲ್ಲೆ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಒಂದು ಗಂಟೆಯೂ ಹೆಚ್ಚು  ಕಾಲ ರೈಲು ನಿಲ್ಲಿಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.

ಸುಮಾರು 14,00 ಕ್ಕೂ ಹೆಚ್ಚು ಅಯೋಧ್ಯೆ ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ಅಯೋಧ್ಯೆಯಿಂದ ವಾಪಸಾಗುತ್ತಿದ್ದರು.  ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣಕ್ಕೆ ರೈಲು ಬಂದಾಗ, ಅನ್ಯಕೋಮಿನ ಮೂವರು ಯುವಕರು ಅಯೋಧ್ಯೆ ಯಾತ್ರಿಕರಿಗೆ ಮೀಸಲಿರುವ ಬೋಗಿ ನಂ 2 ಹತ್ತಿದ್ದಾರೆ. ಈ ವೇಳೆ ಅಯೋಧ್ಯೆ ಯಾತ್ರಿಕರು ಅವರನ್ನು ತಡೆದಿದ್ದು, ಇದರಿಂದಾಗಿ ಕೆರಳಿದ ಆ ಯುವಕರು ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಭರದಲ್ಲಿ ಭೋಗಿಗೆ ಬೆಂಕಿ ಹಚ್ಚುವುದಾಗಿ ಬೆದರಿಸಿರುವುದಾಗಿ ಆರೋಪಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಶ್ರೀರಾಮನ ಭಕ್ತರು, ರೈಲನ್ನು ನಿಲ್ಲಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕೂಡಾ ರೈಲು ನಿಲ್ದಾಣದಕ್ಕೆ ಬಂದು ಹಿಂದೂ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

 

Share Post