BDA; ಮೊದಲ ಬಾರಿಗೆ BDAನಿಂದ ಫ್ಲ್ಯಾಟ್ ಮೇಳ; Full Details
ಬೆಂಗಳೂರು; ಬೆಂಗಳೂರಿನಲ್ಲೊಂದು (Bangalore) ಸ್ವಂತ ಮನೆ ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ… ಆದ್ರೆ, ಬೆಂಗಳೂರಿನಲ್ಲಿ ಸೈಟ್, ಫ್ಲ್ಯಾಟ್ (Site, flat) ಕೊಳ್ಳಬೇಕಾದರೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು… ಇಲ್ಲವಾದರೆ ಮೋಸ ಹೋಗೋದು ಗ್ಯಾರೆಂಟಿ… ಹೀಗಾಗಿ, ಸರ್ಕಾರವೇ ಮನೆಗಳನ್ನು ಕಟ್ಟಿ ಮಾರಾಟ ಮಾರಾಟ ಮಾಡಲಾಗುತ್ತದೆ.. ಸರ್ಕಾರಿ ಸಂಸ್ಥೆಯಾದ ಬಿಡಿಎನಿಂದ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮಾಡಲಾಗಿದ್ದು, BDA FLAT ಮೇಳ ನಡೆಸುತ್ತಿದೆ. ಇದೇ ಮೊದಲ ಬಾರಿಗೆ ಈ ಮೇಳ ನಡೆಯುತ್ತಿದ್ದು, ಮನೆ ಕೊಳ್ಳಬೇಕೆಂದು ನೋಡುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
ಇದನ್ನೂ ಓದಿ; NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?
ಹತ್ತು ದಿನದಲ್ಲೇ ನೋಂದಣಿ ಮಾಡಿಸಿಕೊಳ್ಳಬಹುದು;
ಹತ್ತು ದಿನದಲ್ಲೇ ನೋಂದಣಿ ಮಾಡಿಸಿಕೊಳ್ಳಬಹುದು; ಫೆಬ್ರವರಿ 17ರಂದು ಈ ಫ್ಲ್ಯಾಟ್ ಮೇಳ ನಡೆಯಲಿದೆ. ಈ ವೇಳೆ ಆರಂಭಿಕ ಠೇವಣಿ ಮಾವತಿ ಮಾಡಿದರೆ ಸ್ಥಳದಲ್ಲೇ ಹಂಚಿಕೆ ಪತ್ರ ವಿತರಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಬ್ಯಾಂಕ್ ಲೋನ್ ಮಾಡಿಸಿದರೆ, ಕೇವಲ ಹತ್ತೇ ದಿನದಲ್ಲಿ ಫ್ಲ್ಯಾಟ್ ನಿಮ್ಮ ಹೆಸರಿಗೆ ನೋಂದಣಿಯಾಗಲಿದೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬಿಡಿಎ ಅಧಿಕಾರಿಗಳು ಈ ಮೇಳವನ್ನು ಆಯೋಜನೆ ಮಾಡಿದ್ದಾರೆ. ಮನೆ ಬೇಕು ಎಂದುಕೊಂಡವರು ಈ ಮೇಳದ ಸದುಪಯೋಗಪಡಿಸಿಕೊಳ್ಳಬಹುದು.
ಎಲ್ಲೆಲ್ಲಿ ಎಷ್ಟು ಫ್ಲ್ಯಾಟ್‌ಗಳಿವೆ..? ಬೆಲೆ ಎಷ್ಟು..?;
ಎಲ್ಲೆಲ್ಲಿ ಎಷ್ಟು ಫ್ಲ್ಯಾಟ್‌ಗಳಿವೆ..? ಬೆಲೆ ಎಷ್ಟು..?; ಮೈಸೂರು ರಸ್ತೆಯ ಕೊಮ್ಮಘಟ್ಟ, ಕಣಿಮಿಣಿಕೆ ಹಾಊ ಕೋನದಾಸಪುರದಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲಾಗಿದೆ. ಜೊತೆಗೆ ಚಂದ್ರಾ ಲೇಔಟ್‌ನಲ್ಲೂ ಫ್ಲ್ಯಾಟ್‌ಗಳು ಖಾಲಿ ಇವೆ. ಎಲ್ಲೆಲ್ಲಿ ಎಷ್ಟೆಷ್ಟು ಫ್ಲ್ಯಾಟ್‌ಗಳಿವೆ ಎಂದು ನೋಡೋದಾದರೆ, ಕೊಮ್ಮಘಟ್ಟದಲ್ಲಿ 18, ಕೊಮ್ಮಘಟ್ಟ ಎರಡನೇ ಹಂತದಲ್ಲಿ 40, ಕಣಿಮಿಣಿಕೆ 2ನೇ ಹಂತದಲ್ಲಿ 491, ಕಣಿಮಿಣಿಕೆ 3ನೇ ಹಂತದಲ್ಲಿ 246, ಕಣಿಮಿಣಿಕೆ 4ನೇ ಹಂತದಲ್ಲಿ 52 ಕೋನದಾಸಪುರ ವಿಲೇಜ್ ಫೇಸ್ 2ನಲ್ಲಿ 462 ಹಾಗೂ ಚಂದ್ರಾ ಲೇಔಟ್‌ನಲ್ಲಿ 40 ಫ್ಲಾಟ್‌ಗಳು ಮಾರಾಟಕ್ಕಿವೆ.
ಇದನ್ನೂ ಓದಿ; Qatar; ಮರಣದಂಡನೆಯನ್ನು ಎದುರಿಸಿದ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆ
ಫ್ಲ್ಯಾಟ್‌ಗಳು ಬೆಲೆ ಎರಡು ಬೆಡ್ ರೂಮ್ ಫ್ಲ್ಯಾಟ್‌ಗಳು 25 ಲಕ್ಷದಿಂದ 45 ಲಕ್ಷ ರೂಪಾಯಿವರೆಗೂ ಇವೆ. 45 ಲಕ್ಷ ರೂಪಾಯಿ ಫ್ಲ್ಯಾಟ್ ನಲ್ಲಿ 3 ಬೆಡ್ ರೂಮ್‌ಗಳಿರುತ್ತವೆ. ಇನ್ನು ಚಂದ್ರಾ ಲೇಔಟ್‌ನಲ್ಲಿರುವ ಬಿಡಿಎ ಅಪಾರ್ಟ್‌ಮೆಂಟ್ ಬೆಲೆ 1 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಎಲ್ಲಿ ಫ್ಲ್ಯಾಟ್ ಮೇಳ..? ಸ್ಥಳದಲ್ಲೇ ಸಾಲ ಮಂಜೂರು..!;
ಎಲ್ಲಿ ಫ್ಲ್ಯಾಟ್ ಮೇಳ..? ಸ್ಥಳದಲ್ಲೇ ಸಾಲ ಮಂಜೂರು..!; ಬಿಡಿಎ ಸುಮಾರು ನಾಲ್ಕು ಬಡಾವಣೆಗಳಲ್ಲಿ ಬೇರೆ ಬೇರೆ ಫೇಸ್‌ಗಳಲ್ಲಿ ಸುಮಾರು 2398 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿದೆ. ಇದರಲ್ಲಿ 1349 ಫ್ಲ್ಯಾಟ್‌ಗಳು ಖಾಲಿ ಇದ್ದು, ಇವುಗಳನ್ನು ಫ್ಲ್ಯಾಟ್ ಮೇಳದ ಮೂಲಕ ಮಾರಾಟ ಮಾಡಲಾಗುತ್ತಿದೆ. ಫೆಬ್ರವರಿ 17 ರಂದು ಕೋನದಾಸಪುರ ವಸತಿ ಸಮುಚ್ಚಯದ ಬಳಿ ಈ ಮೇಳ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಫ್ಲ್ಯಾಟ್ ಮೇಳ ನಡೆಯಲಿದೆ. ಈ ಸಮಯದಲ್ಲಿ ಬಂದು ಫ್ಲ್ಯಾಟ್ ಖರೀದಿ ಮಾಡೋದಕ್ಕೆ ಅವಕಾಶವಿದೆ.
ಆನ್‌ಲೈನ್ ಮೂಲಕ ಅಥವಾ ಡಿಡಿ ಮೂಲಕ ಆರಂಭಿಕ ಠೇವಣಿ ಪಾವತಿಸಿದರೆ ಸ್ಥಳದಲ್ಲೇ ಅಧಿಕಾರಿಗಳು ಹಂಚಿಕೆ ಪತ್ರ ನೀಡುತ್ತಾರೆ. ಇನ್ನು ಬ್ಯಾಂಕ್ ಅಧಿಕಾರಿಗಳು ಕೂಡಾ ಆಗಮಿಸುವವರಿದ್ದು, ಸ್ಥಳದಲ್ಲೇ ಸಾಲ ಮಂಜೂರಾತಿ ಕೂಡಾ ನಡೆಯುತ್ತದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡರೆ ಹತ್ತೇ ದಿನದಲ್ಲಿ ರಿಜಿಸ್ಟ್ರೇಷನ್ ಕೂಡಾ ಮುಗಿಯಲಿದೆ.
ಇದನ್ನೂ ಓದಿ; Idli guru; ಪ್ರಾಂಚೈಸಿ ಹೆಸರಿನಲ್ಲಿ ವಂಚನೆ; ಇಡ್ಲಿ ಗುರು ಮಾಲೀಕ ಅರೆಸ್ಟ್!
ಅಪವಾದ ತೊಡೆದು ಹಾಕಲು ಹೊರಟ ಬಿಡಿಎ;
ಅಪವಾದ ತೊಡೆದು ಹಾಕಲು ಹೊರಟ ಬಿಡಿಎ; ಬಿಡಿಎ ಫ್ಲ್ಯಾಟ್‌ಗಳು ಚೆನ್ನಾಗಿಯೇ ಇವೆ. ಆದ್ರೆ ನೋಂದಣಿ ಪ್ರಕ್ರಿಯೆ ತುಂಬಾ ದಿನ ಹಿಡಿಯುತ್ತವೆ ಎಂಬ ಆರೋಪಗಳಿದ್ದವು. ಈ ಅಪವಾದ ತೊಡೆದು ಹಾಕುವುದಕ್ಕಾಗಿಯೇ ಬಿಡಿಎ ಅಧಿಕಾರಿಗಳು ಈ ಫ್ಲ್ಯಾಟ್ ಮೇಳ ಆಯೋಜನೆ ಮಾಡಿದ್ದಾರೆ. ಇಲ್ಲಿ ಖರೀದಿ ಮಾಡಿದರೆ ಸ್ಥದಲ್ಲೇ ನಿಮಗೆ ಮಂಜೂರಾತಿ ಪತ್ರ ಸಿಗುತ್ತದೆ. ನಿಮ್ಮ ಫ್ಲ್ಯಾಟ್ ಯಾವುದು ಎಂಬುದು ಖಾತ್ರಯಾಗುತ್ತದೆ. ಸ್ಥಳದಲ್ಲೇ ಲೋನ್ ಕೂಡಾ ಮಂಜೂರಾಗುವುದರಿಂದ ಆದಷ್ಟು ಬೇಗ ರಿಜಿಸ್ಟ್ರೇಷನ್ ಕೂಡಾ ಮಾಡಿಸಿಕೊಳ್ಳಬಹುದು.