Valentine’s Day Special; ಯಾವ ಸಿನಿಮಾಗೂ ಕಡಿಮೆ ಇಲ್ಲದ ಮುಖೇಶ್-ನೀತಾ ಅಂಬಾನಿ ಲವ್ ಸ್ಟೋರಿ!
ಮುಂಬೈ; ಅಂದು ಧೀರೂಬಾಯಿ ಅಂಬಾನಿ ದೇಶದ ಬಹುದೊಡ್ಡ ಉದ್ಯಮಿ… ನೀತಾ ಒಂದು ಸಾಮಾನ್ಯ ಶಾಲೆಯ ಟೀಚರ್…. ಜೊತೆಗೆ ನೃತ್ಯಾಭ್ಯಾಸ ಕೂಡಾ ಮಾಡುತ್ತಿದ್ದರು.. ಒಮ್ಮೆ ಒಂದು ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.. ಆ ಕಾರ್ಯಕ್ರಮಕ್ಕೆ ಧೀರೂಬಾಯಿ ಅಂಬಾನಿ ಕೂಡಾ ಬಂದಿದ್ದರು.. ನೀತಾ ಅಂಬಾನಿ ನೃತ್ಯ ನೋಡಿ ಖುಷಿಯಾದ ಧೀರಾಬಾಯಿ ಅಂಬಾನಿ, ನಮ್ಮ ಮನೆಗೆ ಇಂತಹ ಸೊಸೆಯೇ ಬರಬೇಕು ಎಂದುಕೊಂಡರು… ಯಾರಿಂದಲೋ ಆಕೆಯ ಮನೆಯ ಫೊನ್ ನಂಬರ್ ಕಲೆಕ್ಟ್ ಮಾಡಿದರು.. ಮನೆಗೆ ಕರೆ ಮಾಡಿ, ತಾನು ಧೀರೂಬಾಯಿ ಅಂಬಾನಿ, ನಮ್ಮ ಮನೆಗೆ ಬನ್ನಿ ಒಮ್ಮೆ ಎಂದು ಕರೆಕೊಟ್ಟಿದ್ದರು… ಆದ್ರೆ ನನ್ನಂತಹ ಸಾಮಾನ್ಯ ಟೀಚರ್‌ಗೆ ಧೀರೂಬಾಯಿ ಅಂಬಾನಿ ಯಾಕೆ ಕರೆ ಮಾಡುತ್ತಾರೆ ಎಂದು ಕರೆ ಕಟ್ ಮಾಡಿದ್ದಳು… ಅನಂತರ ನಾನು ಧೀರೂಬಾಯಿ ಅಂಬಾನಿಯೇ ಎಂದು ನಂಬಿಸೋಕೆ ಧೀರೂಬಾಯಿ ಅಂಬಾನಿ ಸಾಕಷ್ಟು ಕಷ್ಟಪಟ್ಟರು… ಕೊನೆಗೆ ನೀತಾ ಧೀರೂಬಾಯಿ ಅಂಬಾನಿ ಮನೆಗೆ ಬರುತ್ತಾಳೆ… ಆಗ ಎದುರಾಗೋದೇ ಮುಖೇಶ್ ಅಂಬಾನಿ… ಇಲ್ಲಿಂದ ಶುರುವಾಗುತ್ತೆ ಮುಖೇಶ್ ಹಾಗೂ ನೀತಾ ಲವ್ ಸ್ಟೋರಿ…
ಅಪ್ಪ ಮೆಚ್ಚಿದ ಹುಡಗಿ ಮುಖೇಶ್‌ಗೂ ಇಷ್ಟವಾದಳು;
ಅಪ್ಪ ಮೆಚ್ಚಿದ ಹುಡಗಿ ಮುಖೇಶ್‌ಗೂ ಇಷ್ಟವಾದಳು; ಮೊದಲು ನೀತಾಳನ್ನು ನೋಡಿದ್ದು ಧೀರೂಬಾಯಿ ಅಂಬಾನಿ… ತನ್ನ ಮಗನಿಗೆ ಇಂತ ಹೆಂಡತಿಯೇ ಬೇಕು ಎಂದುಕೊಂಡರು… ಧೀರೂಬಾಯಿಯೇ ನೀತಾಳನ್ನು ತನ್ನ ಮನೆವರೆಗೂ ಕರೆಸಿದ್ದರು… ಅದಕ್ಕೆ ಅವರ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ.. ಫೋನ್ ಮಾಡಿ ನಾನು ಧೀರೂಬಾಯಿ ಅಂಬಾನಿ ಎಂದಾಗ, ನೀತಾ ಯಾರೋ ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿದು ಬೈದು ಫೋನ್ ಇಟ್ಟಿದ್ದಳು.. ಕೊನೆಗೆ ಹೇಗೋ ನಂಬಿಸಿ ಮನೆವರೆಗೂ ಕರೆಸಿದ್ದರು… ನೀತಾ ಅವರು ಅಂಬಾನಿ ಮನೆ ಬಾಗಿಲಿಗೆ ಬರುತ್ತದ್ದಂತೆ ಎದುರಾಗಿದ್ದು ಮುಖೇಶ್ ಅಂಬಾನಿ… ನೀತಾಳನ್ನು ನೋಡುತ್ತಲೇ ಮುಖೇಶ್ ಕೂಡಾ ಮನಸೋತಿದ್ದರು… ಆದ್ರೆ ತನ್ನ ಪ್ರೇಮನಿವೇದನೆ ಹೇಳಿಕೊಳ್ಳಲು ಮುಖೇಶ್ ಸಾಕಷ್ಟು ಪರದಾಡಿದ್ದರು..
ಗಲ್ಲಿ ಸುತ್ತಿದರು, ಪಾನಿಪೂರಿ ತಿಂದರು..!;
ಗಲ್ಲಿ ಸುತ್ತಿದರು, ಪಾನಿಪೂರಿ ತಿಂದರು..!; ಯಾವಾಗ ಮುಖೇಶ್‌ಗೆ ನೀತಾ ಇಷ್ಟವಾದರೋ ಇಬ್ಬರ ನಡುವೆ ಸ್ನೇಹ ಬೆಳೆಯಿತು… ಇಬ್ಬರೂ ಮುಂಬೈನ ಗಲ್ಲಿ ಗಲ್ಲಿ ಸುತ್ತಾಡಿದರು… ಹಲವಾರು ದಿನಗಳ ಕಾಲ ಇವರಿಬ್ಬರೂ ಮುಂಬೈನಲ್ಲಿ ಭೇಟಿಯಾಗುತ್ತಾ ಬಂದರು… ಸಣ್ಣ ಸಣ್ಣ ಗಲ್ಲಿಗೆ ಕರೆದುಕೊಂಡು ಹೋದ ನೀತಾ, ಮುಖೇಶ್‌ಗೆ ಮಧ್ಯಮ ವರ್ಗದ ಜೀವನ ತೋರಿಸಿಕೊಟ್ಟರು… ಇದೇ ವೇಳೆ ಇಬ್ಬರೂ ಸೇರಿ ಪಾನಿಪೂರಿ ತಿಂದರು… ಟೀ ಕುಡಿದರು.. ಸಣ್ಣ ಪುಟ್ಟ ಹೋಟೆಲ್‌ನಲ್ಲಿ ತಿಂಡಿ ತಿಂದರು… ಇಷ್ಟೆಲ್ಲಾ ಕ್ಲೋಸ್ ಆದರೂ, ಲವ್ ಯೂ ಹೇಳೋದಕ್ಕೆ ಮುಖೇಶ್ ಅಂಬಾನಿ ಹೆದರಿಕೊಳ್ಳುತ್ತಿದ್ದರು… ಕೊನೆಗೆ ಪ್ರಪೋಸ್ ಮಾಡೋದಕ್ಕೆ ಧೈರ್ಯ ಮಾಡಿದ ಮುಖೇಶ್ ಅಂಬಾನಿ, ನೀತಾಳನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದರು..
ಕಾರಿನಲ್ಲಿ ʻನನ್ನ ಕೈ ಹಿಡಿಯುವೆಯಾ..?ʼ ಎಂದ ಮುಖೇಶ್!;
ಕಾರಿನಲ್ಲಿ ʻನನ್ನ ಕೈ ಹಿಡಿಯುವೆಯಾ..?ʼ ಎಂದ ಮುಖೇಶ್!; ಒಂದು ದಿನ ಮುಖೇಶ್ ಅವರು ನೀತಾಳನ್ನು ಲಾಂಗ್ ಡ್ರೈವ್‌ಗೆ ಕರೆದಿದ್ದರು.. ಕಾರಿನಲ್ಲಿ ಹೋಗುತ್ತಿರಬೇಕಾದರೆ ನೀತಾ ಕೂಲ್ ಆಗಿರುವುದನ್ನು ನೋಡಿ, ʻನೀನು ನನ್ನ ಕೈ ಹಿಡಿಯುವೆಯಾ..?ʼ ಎಂದು ಕೇಳಿಬಿಟ್ಟಿದ್ದರು.. ನೀತಾ ಕೂಡಾ ಅದಕ್ಕಾಗಿಯೇ ಕಾಯುತ್ತಿದ್ದಳು.. ಯಾಕಂದ್ರೆ ನೀತಾಗೂ ಮುಖೇಶ್ ಇಷ್ಟವಾಗಿಬಿಟ್ಟಿದ್ದರು… ಹೀಗಾಗಿ ನನಗೂ ನಿಮ್ಮನ್ನು ಮದುವೆಯಾಗಬೇಕು ಅನಿಸಿದೆ… ಆದ್ರೆ ಒಂದು ಷರತ್ತು ಎಂದರು… ಎಂತಹ ಬೇಡಿಕೆಯಾದರೂ ಈಡೇರಿಸುವ ಶಕ್ತಿ ಹೊಂದಿದ್ದ ಮುಖೇಶ್ ಹೇಳು ನೀನು ಯಾವ ಷರತ್ತು ಹಾಕಿದರೂ ನಾನು ಒಪ್ಪುತ್ತೇನೆ ಎಂದಿದ್ದರು..
ಮದುವೆಯಾದ ಮೇಲೂ ಶಿಕ್ಷಕಿ ವೃತ್ತಿ ಮುಂದುವರೆಸುತ್ತೇನೆ ಎಂದಿದ್ದ ನೀತಾ;
ಮದುವೆಯಾದ ಮೇಲೂ ಶಿಕ್ಷಕಿ ವೃತ್ತಿ ಮುಂದುವರೆಸುತ್ತೇನೆ ಎಂದಿದ್ದ ನೀತಾ; ಆಗ ನೀತಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.. ನಾನು ನಿಮ್ಮನ್ನು ಮದುವೆಯಾದ ಮೇಲೂ ಶಿಕ್ಷಕಿ ವೃತ್ತಿ ಮುಂದುವರೆಸುತ್ತೇನೆ ಎಂದು ಹೇಳಿದಳು… ಮುಖೇಶ್ ಗೆ ಕೂಡಾ ಶಿಕ್ಷಕ ವೃತ್ತಿ ಅಂದ್ರೆ ಇಷ್ಟ…. ಅವರು ಕೂಡಾ ಕಾಲೇಜು ಪ್ರೊಫೆಸರ್ ಆಗಬೇಕು ಎಂದು ಕನಸು ಕಂಡಿದರಂತೆ.. ಆದ್ರೆ ಅಪ್ಪನ ಉದ್ಯಮ ದೊಡ್ಡದಾಗಿ ಬೆಳೆದಿದ್ದರಿಂದ ಅದರಲ್ಲೇ ಮುಂದುವರೆಯಬೇಕಾದ ಅನಿವಾರ್ಯತೆ ಮುಖೇಶ್‌ಗೆ ಬಂತು.. ಹೀಗಾಗಿ ಮುಖೇಶ್ ಕನಸು ಈಡೇರಲಿಲ್ಲ.. ಹೀಗಾಗಿ ನೀತಾ ಕನಸು ನನಸು ಮಾಡಲು ಮುಖೇಶ್ ಒಪ್ಪಿಕೊಂಡರು..
1985ರಲ್ಲಿ ಮುಖೇಶ್ ಕೈಹಿಡಿದ ನೀತಾ ಅಂಬಾನಿ:
1985ರಲ್ಲಿ ಮುಖೇಶ್ ಕೈಹಿಡಿದ ನೀತಾ ಅಂಬಾನಿ: ಕೊನೆಗೆ ನೀತಾ ಅಂಬಾನಿ ಮದುವೆಗೆ ಒಪ್ಪಿದರು. 1985ರಲ್ಲಿ ಇವರಿಬ್ಬರು ಮದುವೆಯೂ ಆಯಿತು… ನೀತಾ ಮದುವೆಯಾದ ಮೇಲೂ ಕೆಲಕಾಲ ಟೀಚರ್ ಆಗಿ ಕೆಲಸ ಮಾಡಿದರು.. ಆದ್ರೆ ಕೆಲಕಾಲದ ನಂತರ ಅದನ್ನ ತೊರೆದರು.. ಆದ್ರೂ ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿಯನ್ನು ಅವರು ಬಿಟ್ಟಿಲ್ಲ… ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಶಾಲೆಯನ್ನು ಅವರೇ ನಡೆಸುತ್ತಾರೆ.. ಇದರ ಜೊತೆಗೆ ರಿಲಾಯನ್ಸ್ ಫೌಂಡೇಷನ್ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೂಡಾ ನೀತಾ ಅಂಬಾನಿ ನಡೆಸುತ್ತಿದ್ದಾರೆ.