Congress Clash; ಕೋಲಾರದಲ್ಲಿ ಕೊತ್ತೂರು-ಕೆ.ಹೆಚ್.ಮುನಿಯಪ್ಪ ಬೆಂಬಲಿಗರ ಜಟಾಪಟಿ!
ಕೋಲಾರ; ಕಳೆದ ಲೋಕಸಭಾ ಚುನಾವಣೆಯಲ್ಲಿ ಶುರುವಾದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ ಇನ್ನೂ ಮುಂದುವರೆದಿದೆ.. ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ಕೊತ್ತೂರು ಮಂಜುನಾಥ್ ಅವರ ಎರಡು ಗುಂಪುಗಳಿದ್ದು, ಹಾವು ಮುಂಗಸಿಯಂತೆ ಎರಡೂ ಕಡೆಯವರು ಕಚ್ಚಾಟ ಮುಂದುವರೆಸಿದ್ದಾರೆ. ಇವತ್ತೂ ಕೂಡಾ ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಎರಡು ಗುಂಪುಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಹಲ್ಲೆ ಕೂಡಾ ನಡೆದಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಕಚ್ಚಾಟ!;
ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಕಚ್ಚಾಟ!; ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೂತ್ ಮಟ್ಟದ ಏಜೆಂಟರ್ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ. ಸಭೆ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರ್‌ನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ನಸೀರ್ ಅಹ್ಮದ್ ಅವರ ಫೋಟೋಗಳು ಇರಲಿಲ್ಲ. ಇದರಿಂದ ರೊಚ್ಚಿಗೆದ್ದ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು, ಗಲಾಟೆ ಶುರು ಮಾಡಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಊರುಬಾಗಿಲು ಶ್ರೀನಿವಾಸ್ ಮೇಲೆ ಕೊತ್ತೂರು ಬೆಂಬಲಿಗರ ಹಲ್ಲೆ!;
ಊರುಬಾಗಿಲು ಶ್ರೀನಿವಾಸ್ ಮೇಲೆ ಕೊತ್ತೂರು ಬೆಂಬಲಿಗರ ಹಲ್ಲೆ!; ಏಕಾಏಕಿ ಸಬೆಗೆ ನುಗ್ಗಿದ ಕೊತ್ತೂರು ಮಂಜುನಾಥ್ ಬೆಂಬಲಿಗರು ದಾಳಿ ಮಾಡಿದ್ದಾರೆ. ಹೀಗಾಗಿ ಎರಡೂ ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಅವರ ಮುಂದೆಯೇ ಇಷ್ಟೆಲ್ಲಾ ನಡೆದುಹೋಗಿದೆ.
ಬ್ಯಾನರ್‌ನಲ್ಲಿ ಒಂದು ಗುಂಪಿನ ನಾಯಕರ ಫೊಟೋ ಹಾಕದೇ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಗ್ನ ಸ್ಥಿತಿ ಉಂಟಾಗಿತ್ತು.
ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿದ್ದ ಗುಂಪು;
ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿದ್ದ ಗುಂಪು; ಶಾಸಕ ಕೊತ್ತೂರು ಮಂಜುನಾಥ್ ಸೇರಿ ಹಲವರು ಕಾಂಗ್ರೆಸ್ ಮುಖಂಡರಿಗೂ ಕೆ.ಹೆಚ್.ಮುನಿಯಪ್ಪಗೂ ಮುನಿಸಿದೆ. ಈ ಕಾರಣಕ್ಕಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದರು. ಕೊತ್ತೂರು ಮಂಜುನಾಥ್ ಅವರು ನೇರವಾಗಿಯೇ ಮುನಿಯಪ್ಪ ವಿರುದ್ಧ ಪ್ರಚಾರ ಮಾಡಿದ್ದರು. ಬಿಜೆಪಿ ಪರವಾಗಿ ಮತ ಯಾಚನೆ ಮಾಡಲಾಗಿತ್ತು. ಇದಾದ ಮೇಲೆ ಆಗಾ ಗಲಾಟೆಗಳು ನಡೆಯುತ್ತಲೇ ಬಂದಿದ್ದವು. ಇದೀಗ ಮತ್ತೆ ಕೆ.ಹೆಚ್.ಮುನಿಯಪ್ಪ ಅವರೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಾಗಿ ಹೋಗಬೇಕಿರುವ ಮುಖಂಡರು ಹೀಗೆ ಬಡಿದಾಡಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು ತಂದಿದೆ.