Health

Cholesterol Control; ಕೊಬ್ಬ ಕರಗಿಸಿ, ಹೃದಯದ ಆರೋಗ್ಯ ಕಾಪಾಡುವ 5 ಆಹಾರಗಳು!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್‌ನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅತಿಯಾದ ಆಹಾರ ಸೇವನೆ, ಜಂಕ್ ಫುಡ್, ದೈಹಿಕ ಚಟುವಟಿಕೆಗಳ ಕೊರತೆ, ಜೀವನಶೈಲಿಯಲ್ಲಿನ ಬದಲಾವಣೆ, ಕೆಲಸದ ಒತ್ತಡ, ನಿದ್ರೆಯ ಕೊರತೆ ಮುಂತಾದ ಕಾರಣಗಳಿಂದಾಗಿ  ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಾನೇ ಹೆಚ್ಚಾಗುತ್ತಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿದ್ದರೆ, ಹೃದಯ ಸಮಸ್ಯೆಗಳು, ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ತೆಗೆದುಕೊಳ್ಳಬೇಕು..? ಇಲ್ಲಿದೆ ಮಾಹಿತಿ..

ಇದನ್ನೂ ಓದಿ; Dairy Products; ಒಂದು ತಿಂಗಳು ಡೈರಿ ಉತ್ಪನ್ನ ತ್ಯಜಿಸಿ; ದೇಹದ ಬದಲಾವಣೆ ನೋಡಿ

ಬೆರ್ರಿ ಹಣ್ಣುಗಳು (berry);

ಬೆರ್ರಿ ಹಣ್ಣುಗಳು (berry); ಬ್ಲ್ಯಾಕ್‌ಬೆರಿಗಳು, ರಸ್ಬೆರ್ರಿ, ಕ್ರ್ಯಾನ್‌ಬೆರಿಗಳು, ಬ್ಲೂಬೆರ್ರಿಗಳು ಮತ್ತು ಸ್ಟ್ರಾಬೆರಿಗಳು ಫ್ಲೇವನಾಯ್ಡ್‌ಗಳಲ್ಲಿ ಸಮೃದ್ಧವಾಗಿವೆ.  ಇವುಗಳಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೇಲಾಗಿ ಇವುಗಳಲ್ಲಿರುವ ನಾರಿನಂಶದಿಂದಾಗಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಬೆರ್ರಿಗಳಲ್ಲಿನ ಪೋಷಕಾಂಶಗಳು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಒಳ್ಳೆಯ ಕೊಲೆಸ್ಟ್ರಾಲ್ ನಿಂದಾಗಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದಂತಾಗುತ್ತದೆ.

ಇದನ್ನೂ ಓದಿ; Idli; ಇಡ್ಲಿ ತಿನ್ನೋದ್ರಿಂದ ಇಷ್ಟೆಲ್ಲಾ ಲಾಭಗಳಿವೆಯಾ..?

ಬದನೆ ಕಾಯಿ (Eggplant);

ಬದನೆ ಕಾಯಿ (Eggplant); ಬಿಳಿಬದನೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕರಗುವ ನಾರಿನಂಶ ಉತ್ತಮವಾಗಿದೆ. ಬಿಳಿಬದನೆಯಲ್ಲಿ ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ3, ಬಿ6, ಬೀಟಾ ಕ್ಯಾರೋಟಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಈ ಪೋಷಕಾಂಶಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಆವಕಾಡೊ(avocado);

ಆವಕಾಡೊ; ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಟಿಸಿರುವ ಸಂಶೋಧನೆಯ ಪ್ರಕಾರ ಪ್ರತಿದಿನ ಆವಕಾಡೊ ತಿಂದರೆ ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ. ಈ ಹಣ್ಣುಗಳು ಮನುಷ್ಯರಿಗೆ ಅಗತ್ಯವಿರುವ ಕೊಬ್ಬನ್ನು ಮಾತ್ರ ಹೊಂದಿರುತ್ತವೆ. ಈ ಹಣ್ಣುಗಳನ್ನು ಊಟದ ಜೊತೆಗೆ ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ ಮತ್ತು ಅನಗತ್ಯ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಆವಕಾಡೊ ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಆಕ್ಸಿಡೀಕರಿಸುತ್ತದೆ. ಅಧ್ಯಯನಗಳ ಪ್ರಕಾರ, ಪ್ರತಿದಿನ ಆವಕಾಡೊಗಳನ್ನು ತಿನ್ನುವುದರಿಂದ ಆಕ್ಸಿಡೀಕೃತ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ; Horoscope; ಈ ರಾಶಿಯವರು ಅತ್ತೆ-ಮಾವಂದಿರನ್ನು ಸ್ವಂತ ಪೋಷಕರಂತೆ ನೋಡಿಕೊಳ್ತಾರೆ!!

ಬೆಂಡೆಕಾಯಿ (Okra);

ಬೆಂಡೆಕಾಯಿ (Okra); ಬೆಂಡೆಕಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು, ವಿಟಮಿನ್-ಎ, ವಿಟಮಿನ್-ಬಿ1, ಬಿ2, ಬಿ3, ಬಿ9, ವಿಟಮಿನ್-ಸಿ, ವಿಟಮಿನ್-ಇ, ವಿಟಮಿನ್-ಕೆ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬದನೆಕಾಯಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಕರಗುವ ಮತ್ತು ಕರಗದ ಫೈಬರ್‌ನಿಂದ ಸಮೃದ್ಧವಾಗಿದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಅವು ಸಹಾಯ ಮಾಡುತ್ತವೆ.

ಇದನ್ನೂ ಓದಿ; Lakshmi Manthra; ಈ ಲಕ್ಷ್ಮೀ ಮಂತ್ರ ಪಠಿಸಿದರೆ ಮನೆಯಲ್ಲಿ ಹಣವೋ ಹಣ..!

ಸೇಬು(apple);

ಸೇಬು(apple);ಸೇಬುಗಳು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಸೇಬು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೋಲೇಟ್, ಬೀಟಾ ಕ್ಯಾರೋಟಿನ್, ವಿಟಮಿನ್ ಕೆ ಮುಂತಾದ ಪೋಷಕಾಂಶಗಳು ನಮ್ಮ ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ. ಸೇಬುಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಫೈಬರ್ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಸೇಬುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

Share Post