NationalPolitics

Sumalatha; ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಲಾಬಿ ಶುರು; ವರಿಷ್ಠರ ಭೇಟಿಯಲ್ಲಿ ಆಶ್ವಾಸನೆ ಸಿಕ್ತಾ..?

ನವದೆಹಲಿ; ಮಂಡ್ಯ ರಾಜಕಾರಣ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಬಿಜೆಪಿ ಜೊತೆ ಲೋಕಸಭಾ (Loksabha) ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌, ಮಂಡ್ಯ ಕ್ಷೇತ್ರವನ್ನು ಕೇಳುತ್ತಿದೆ. ಆದ್ರೆ ಹಾಲಿ ಸಂಸದೆ ಸುಮಲತಾ (Sumalatha) ಕೋಡೋಂಗಿದ್ರೆ ಮಂಡ್ಯ ಟಿಕೆಟ್‌ ಮಾತ್ರ ಕೊಡಿ ಅಂತಿದ್ದಾರೆ. ಇದರ ನಡುವೆ ಜೆಡಿಎಸ್‌ಗೆ ಮಂಡ್ಯ ಬಿಟ್ಟುಕೊಟ್ಟಾಗಿದೆ ಎಂದೇ ಹೇಳಲಾಗುತ್ತಿತ್ತು. ಆದ್ರೆ ಈಗ ಮಂಡ್ಯ ರಾಜಕಾರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸಂಸದೆ ಸುಮಲತಾ ಅವರು ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದು, ಚರ್ಚೆಗೆ ಕಾರಣರಾಗಿದ್ದಾರೆ.

ಇತ್ತೀಚೆಗೆ ಮೀಟಿಂಗ್‌ ಮಾಡಿದ್ದ ಮಂಡ್ಯ ಬಿಜೆಪಿಗರು!

ಇತ್ತೀಚೆಗೆ ಮೀಟಿಂಗ್‌ ಮಾಡಿದ್ದ ಮಂಡ್ಯ ಬಿಜೆಪಿಗರು!; ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡೋದು ಬಹುತೇಕ ಫಿಕ್ಸ್‌ ಆದರೂ ಕೂಡಾ ಕೊನೇ ಹಂತದ ಪ್ರಯತ್ನ ನಡೆಯುತ್ತಿದೆ. ಸುಮಲತಾ ಅವರು ಕಾಂಗ್ರೆಸ್‌ಗೆ ಹೋದರೆ ಮತ್ತೆ ಇಲ್ಲಿ ಭಾರೀ ಫೈಟ್‌ ಇರಲಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್‌ ಸುಮಲತಾ ಅವರನ್ನೂ ಬಿಟ್ಟುಕೊಡೋದಕ್ಕೆ ರೆಡಿ ಇಲ್ಲ. ಈ ನಡುವೆ ಮಂಡ್ಯ ಜಿಲ್ಲೆಯಲ್ಲಿ ಹಲವು ಬಿಜೆಪಿ ಮುಖಂಡರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಕೂಡಾ ಭಾಗವಹಿಸಿದ್ದರು. ಇಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟುಕೊಡಬಾರದು ಎಂಬ ಆಗ್ರಹ ಕೇಳಿಬಂದಿತ್ತು. ಮಾಜಿ ಶಾಸಕ ಪ್ರೀತಂ ಗೌಡ ಕೂಡಾ ಸುಮಲತಾ ಅವರ ಪರವಾಗಿ ಬ್ಯಾಟ್‌ ಬೀಸಿದ್ದರು. ಹೀಗಿರುವಾಗಲೇ ಸುಮಲತಾ ಅವರು ಬಿಜೆಪಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ; Mandya Politics; ಮಂಡ್ಯದಲ್ಲಿ ಮತ್ತೆ ಸುಮಲತಾ-ನಿಖಿಲ್‌ ಕುಮಾರಸ್ವಾಮಿ ಫೈಟ್‌..?

ಜೆ.ಪಿ.ನಡ್ಡಾ ಹಾಗೂ ಬಿ.ಎಲ್‌.ಸಂತೋಷ್‌ ಭೇಟಿ

ಜೆ.ಪಿ.ನಡ್ಡಾ ಹಾಗೂ ಬಿ.ಎಲ್‌.ಸಂತೋಷ್‌ ಭೇಟಿ; ಮಂಡ್ಯ ಸಂಸದೆ ಸುಮಲತಾ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ಸಂತೋಷ್‌ ಅವರನ್ನು ಭೇಟಿಯಾಗಿದ್ದಾರೆ. ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಇನ್ನು ಎರಡು ಮೂರು ತಿಂಗಳು ಇರುವಾಗ ಸುಮಲತಾ ಅವರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಮಂಡ್ಯವನ್ನು ಬಿಜೆಪಿ ತೆಕ್ಕೆಯಲ್ಲೇ ಇಟ್ಟುಕೊಳ್ಳುತ್ತದಾ ಅಥವಾ ಜೆಡಿಎಸ್‌ಗೆ ಬಿಟ್ಟುಕೊಡುತ್ತದಾ ಎಂಬ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ; Keragodu Issue; ಹೋರಾಟದಿಂದ ಜೆಡಿಎಸ್‌ ಪಕ್ಷ ಅಂತರ..?; ನಾಳೆ ಮಂಡ್ಯ ಬಂದ್‌ ಆಗುತ್ತಾ..?

ಸುಮಲತಾ ಅವರ ಟ್ವೀಟ್‌ನಲ್ಲಿ ಏನಿದೆ..?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾ ಅವರನ್ನು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್‌. ಸಂತೋಷ್‌ ಅವರನ್ನು ಅನೌಪಚಾರಿಕವಾಗಿ ಇಂದು ಭೇಟಿ ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು.

ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ಶ್ರೀ ನಡ್ಡಾ ಜಿ ಅವರಿಗೂ ಶ್ರೀ ಸಂತೋಷ್ ಜಿ ಅವರಿಗೂ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು.

ಇದನ್ನೂ ಓದಿ; Gandhi Statue; ವಿಧಾನಸೌಧದ ಗಾಂಧಿ ಫುಲ್‌ ಬ್ಯುಸಿ, ಎಂಜಿ ರಸ್ತೆಯ ಗಾಂಧಿ ಅನಾಥ!

Share Post