BengaluruCrime

ಬೆಂಗಳೂರಿನಲ್ಲಿ ಮತ್ತೊಂದು ಪ್ರತಿಷ್ಠಿತ ಶಾಲೆಗೆ ಬಂಬ್‌ ಬೆದರಿಕೆ

ಬೆಂಗಳೂರು; ಇತ್ತೀಚೆಗೆ ಕೆಲ ಶಾಲೆಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಇ-ಮೇಲ್‌ ಬಂದಿತ್ತು. ಇದರಿಂದಾಗಿ ಆತಂಕ ಎದುರಾಗಿತ್ತು. ಆದ್ರೆ ಅದು ಹುಸಿ ಬಾಂಬ್‌ ಬೆದರಿಕೆ ಅನ್ನೋದು ತಪಾಸಣೆ ಮಾಡಿದ ಮೇಲೆ ಗೊತ್ತಾಗಿತ್ತು. ಇದು ಹೀಗಿರುವಾಗಲೇ ದುಷ್ಕರ್ಮಿಗಳು ಮತ್ತೆ ಇನ್ನೊಂದು ಶಾಲೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಇ-ಮೇಲ್‌ ಮಾಡಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಆತಂಕ ಎದುರಾಗಿದೆ.
Sahukarisrinuvasarao65@gmail.com ಎಂಬ ಇ-ಮೇಲ್ ಐಡಿ ಮೂಲಕ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಕ್‌ ಬೆದರಿಕೆ ಬಂದಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಬಾಂಬ್‌ ಸ್ಕ್ವಾಡ್‌ ಜೊತೆ ಶಾಲೆಗೆ ಆಗಮಿಸಿದ್ದು ಪರಿಶೀಲನೆ ಮಾಡುತ್ತಿದ್ದಾರೆ.
ಎರಡು ತಿಂಗಳ ಹಿಂದೆ ಬೆಂಗಳೂರು 20ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಬಂದಿತ್ತು. ಒಂದೇ ಇ-ಮೇಲ್‌ನಿಂದ ಪ್ರತ್ಯೇಕವಾಗಿ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಇ-ಮೇಲ್‌ ಕಳುಹಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳೆಲ್ಲಾ ಇದ್ದವು. ಇದರಿಂದಾಗಿ ಆಗ ದೊಡ್ಡ ಆತಂಕ ಶುರುವಾಗಿತ್ತು. ಅದೂ ಕೂಡಾ ಒಂದೇ ದಿನ ಎಲ್ಲಾ ಶಾಲೆಗಳಿಗೆ ಬೆದರಿಕೆ ಬಂದಿದ್ದರಿಂದ ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಆದ್ರೆ ಅದು ಹುಸಿ ಬೆದರಿಕೆ ಅನ್ನೋದು ಗೊತ್ತಾಗೋದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ.
ಅದಾದ ಮೇಲೆ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿಗೂ ಬೆದರಿಕೆ ಬಂದಿತ್ತು. ಆದ್ರೆ ಎಲ್ಲವೂ ಹುಸಿ ಬೆದರಿಕೆಗಳೇ. ಯಾಕೆ ಹೀಗೆ ಮಾಡುತ್ತಿದ್ದಾರೋ ಯಾರಿಗೂ ಅರ್ಥವಾಗುತ್ತಿಲ್ಲ. ಹಾಗಂತ ಹುಸಿ ಇರುತ್ತವೆ ಎಂದು ಸುಮ್ಮನೆ ಕೂರೋದಕ್ಕೂ ಆಗೋದಿಲ್ಲ. ಬೆದರಿಕೆ ಬಂದ ತಕ್ಷಣ ಪೊಲೀಸರು ಎಲ್ಲಾ ಕೆಲಸ ಬಿಟ್ಟು, ಬಾಂಬ್‌ ಹುಡುಕೋ ಕೆಲಸ ಮಾಡಬೇಕಾದ ಪರಿಸ್ಥಿತಿ.

Share Post