National

ಸರ್ಕಾರಿ ಮದರಸಾಗಳ ಪಠ್ಯದಲ್ಲಿ ಶ್ರೀರಾಮನ ಕಥೆ ಸೇರಿಸ್ತಾರಂತೆ!

ಉತ್ತರಾಖಂಡ್‌; ಉತ್ತರಾಖಂಡ್‌ನಲ್ಲಿ ಸರ್ಕಾರಿ ಸ್ವಾಮ್ಯದ ಮದರಸಾಗಳಲ್ಲಿ ಶ್ರೀರಾಮನ ಕಥೆಯ ಪಠ್ಯವನ್ನು ಸೇರಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷದಿಂದಲೇ ಇದು ಜಾರಿಯಾಗಲಿದೆ. ವಕ್ಫ್‌ ಮಂಡಳಿ ಜೊತೆ ಸಂಯೋಜಿತವಾಗಿರುವ ಮದರಸಾಗಳು ಹೊಸ ಪಠ್ಯದಲ್ಲಿ ಶ್ರೀರಾಮನ ಕಥೆಯನ್ನಯ ಸೇರಿಸಲಾಗುತ್ತದೆ ಎಂದು ಡೆಹ್ರಾಡೂನ್‌ ವಕ್ಫ್‌ಬೋರ್ಡ್‌ ಅಧ್ಯಕ್ಷ ಶಾದಾಬ್‌ ಶಾಮ್ಸ್‌ ಹೇಳಿದ್ದಾರೆ.

ಮಾರ್ಚ್‌ನಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ಪಠ್ಯದಲ್ಲಿ ಶ್ರೀರಾಮನ ಕಥೆ ಸೇರಿಸಲು ತೀರ್ಮಾನಿಸಲಾಗಿದೆ.  ಮದರಸಾಗಳಲ್ಲಿ ಓದುತ್ತಿರುವ ಮಕ್ಕಳು ಔರಂಗಜೇಬನಂತಲ್ಲದೆ, ಶ್ರೀರಾಮನಂತೆ ಆಗಬೇಕೆಂಬುದು ನಮ್ಮ ಉದ್ದೇಶ ಎಂದು ಡೆಹ್ರಾಡೂನ್‌ ವಕ್ಫ್‌ಬೋರ್ಡ್‌ ಅಧ್ಯಕ್ಷ ಶಾದಾಬ್‌ ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ಮತ್ತು ಭಗವಾನ್ ರಾಮನ ಜೀವನ ಕಥೆಯನ್ನು ಮದರಸಾಗಳನ್ನು ಬೋಧಿಸಲಾಗುತ್ತದೆ. ಹಿರಿಯ ಮುಸ್ಲಿಂ ಧರ್ಮಗುರುಗಳು ಕೂಡಾ ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದೂ ಶಾದಾಬ್‌ ಹೇಳಿದ್ದಾರೆ.

ಉತ್ತರಾಖಂಡ್ ಸರ್ಕಾರದ ಅಡಿಯಲ್ಲಿ 117 ಮದರಸಾಗಳಿವೆ. ನೂತನ ಪಠ್ಯಕ್ರಮವು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿರುವ ಮದರಾಸಗಳಲ್ಲಿ ಸೇರಿಸಲಾಗುತ್ತದೆ.

 

Share Post