DistrictsPolitics

ಬಿ.ವೈ.ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ; ಹಿರಿಯ ಕಾಂಗ್ರೆಸ್‌ ನಾಯಕ ಶಾಮನೂರು ಬಿಜೆಪಿ ಪರ ಪ್ರಚಾರ!

ಶಿವಮೊಗ್ಗ; ರಾಜ್ಯ ಸರ್ಕಾರದಲ್ಲಿ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ… ಅವರಿಗೀಗ ಬರೋಬ್ಬರಿ 95 ವರ್ಷ ವಯಸ್ಸು… ಆರು ದಶಕಗಳಿಗೂ ಹೆಚ್ಚು ಕಾಲ ಅವ್ರು ಕಾಂಗ್ರೆಸ್‌ಗಾಗಿ ದುಡಿದಿದ್ದಾರೆ… ಈಗಲೂ ಅವ್ರು ಕಾಂಗ್ರೆಸ್‌ ಶಾಸಕರು… ಅವರ ಮಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ… ಆದ್ರೂ ಶಿವಶಂಕರಪ್ಪ ಬಿಜೆಪಿ ಪರ ಪ್ರಚಾರ ಶುರು ಮಾಡಿದ್ದಾರೆ… ಶಿವಮೊಗ್ಗದಲ್ಲಿ ನಡೆದ ಸ್ಟೇಜ್‌ ಕಾರ್ಯಕ್ರಮದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ತಮ್ಮ ಸಮಾಜದ ಜನಕ್ಕೆ ಕರೆ ಕೊಟ್ಟಿದ್ದಾರೆ… ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಪರ ಪ್ರಚಾರಕ್ಕಿಳಿದಿರುವ ಶಾಮನೂರು ಶಿವಶಂಕರಪ್ಪ ಅವರ ನಡೆ ಕಾಂಗ್ರೆಸ್‌ ನಾಯಕರಿಗೆ ಇರಿಸುಮುರಿಸು ತಂದಿದೆ…
ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು… ಕಾಂಗ್ರೆಸ್‌ ಪಕ್ಷದಲ್ಲಿ ಅತಿದೊಡ್ಡ ಲಿಂಗಾತಯ ನಾಯಕರು… ಕಳೆದ ಎರಡು ದಶಕಗಳಿಂದ ಅವರು ಮುಖ್ಯಮಂತ್ರಿ ಆಗೋದಕ್ಕೆ ಸಾಕಷ್ಟು ಪ್ರಯತ್ನಪಟ್ಟರಾದರೂ ಆಗಲಿಲ್ಲ… ಆದರೂ ಅವರು ಪಕ್ಷ ತೊರೆಯಲಿಲ್ಲ… ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಾರೆ… ಹಾಗಂತ, ಶಾಮನೂರಿಗೆ ಪಕ್ಷದ ಮೇಲೆ ಅಗಾಧ ಪ್ರೀತಿ ಇದೆ ಅನ್ನೋದಕ್ಕೆ ಆಗಲ್ಲ… ಅದಕ್ಕಿಂತ ಹೆಚ್ಚಾಗಿ ಅವರಿಗೆ ಜಾತಿ ಪ್ರೀತಿಯೇ ಹೆಚ್ಚಿದೆ… ಲಿಂಗಾಯತ ಸಮುದಾಯದ ಪರವಾಗಿ ಅವರು ಯಾವಾಗಲೂ ಧ್ವನಿ ಎತ್ತುತ್ತಲೇ ಬಂದಿದ್ದಾರೆ… ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಧಾರ ಮಾಡಿದಾಗ ಶಾಮನೂರು ಶಿವಶಂಕರಪ್ಪ ಅವರು ಕೂಡಾ ವಿರೋಧ ಮಾಡಿದ್ದಾರೆ… ಸ್ವಪಕ್ಷದ ವಿರುದ್ಧ ಕೂಡಾ ಸಿಡಿದೇಳಲು ಶಾಮನೂರು ಅವರು ಯಾವಾಗಲೂ ರೆಡಿ ಇರುತ್ತಾರೆ ಅನ್ನೋದಕ್ಕೆ ಇದು ಉದಾಹರಣೆ ಅಷ್ಟೇ… ಇಂತಹ ಎಕ್ಸಾಂಪಲ್ಸ್‌ ಸಾಕಷ್ಟು ನಮ್ಮ ಕಣ್ಣ ಮುಂದೆ ಇವೆ… ಹೀಗಿರುವಾಗಲೇ ಅವರು ಬಿಜೆಪಿ ಪರ ಬ್ಯಾಟ್‌ ಬೀಸಿದ್ದಾರೆ… ತಮ್ಮದೇ ಸಮುದಾದವರು ಅನ್ನೋ ಕಾರಣಕ್ಕೆ ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಪರ ಪ್ರಚಾರ ಮಾಡಿದ್ದಾರೆ.
ಬಿ.ವೈ.ರಾಘವೇಂದ್ರ ಅವರನ್ನು ಸಂಸದರಾಗಿ ಆಯ್ಕೆ ಮಾಡಿರುವುದು ನಿಮ್ಮ ಪುಣ್ಯ… ಅವರು ಶಿವಮೊಗ್ಗವನ್ನು ತುಂಬಾ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಕೂಡಾ ಬಿಜೆಪಿಯಿಂದ ಅವರಿಗೇ ಟಿಕೆಟ್‌ ಸಿಗಲಿದೆ.. ಅವರನ್ನು ಈ ಬಾರಿಯೂ ಬಹುಮತದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದಿದ್ದಾರೆ… ಒಬ್ಬ ಹಿರಿಯ ಕಾಂಗ್ರೆಸ್‌ ನಾಯಕರಾಗಿ ಬಿಜೆಪಿ ಪರವಾಗಿ ಪ್ರಚಾರ ಮಾಡಿರುವುದು ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ… ಈ ಬಾರಿ ಹೇಗಾದರೂ ಮಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಎಂದು ಕಾಂಗ್ರೆಸ್‌ ನಾಯಕರು ಪಣ ತೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಶಿವಮೊಗ್ಗ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಣಕ್ಕಿಳಿಸೋದಕ್ಕೆ ಮಧು ಬಂಗಾರಪ್ಪ ತಯಾರಿ ನಡೆಸಿದ್ದಾರೆ.. ಈ ನಡುವೆ ಕುಮಾರ್‌ ಬಂಗಾರಪ್ಪ ಅವರನ್ನೇ ಕಾಂಗ್ರೆಸ್‌ಗೆ ಕರೆತಂದು ರಾಘವೇಂದ್ರ ಅವರ ವಿರುದ್ಧ ಅಖಾಡಕ್ಕಿಳಿಸೋ ಪ್ರಯತ್ನವೂ ನಡೆಯುತ್ತಿದೆ. ಹೀಗಿರುವಾಗಲೇ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ… ಇದು ಕಾಂಗ್ರೆಸ್‌ ಪಾಲಿಗೆ ಹೊಡೆತ ಎಂದೇ ಹೇಳಬಹುದು..
ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಮರಳಿದರು… ಇತ್ತ ಶಾಮನೂರು ಶಿವಶಂಕರಪ್ಪ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ಕೊಟ್ಟಿದ್ದಾರೆ… ಹೀಗಾದರೆ, ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋದಕ್ಕೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡಿದೆ.

Share Post