ರಾಮಮಂದಿರ ಜಾಗದಲ್ಲಿ 500 ವರ್ಷದಿಂದ ನಮಾಜ್ ನಡೆದಿದೆ; ಓವೈಸಿ ವಿವಾದ
ಕಲಬುರಗಿ; ವಿವಾದಿತ ಹೇಳಿಕೆಗಳಿಂದ ಕುಖ್ಯಾತಿ ಹೊಂದಿರುವ ಸಂಸದ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದಾರೆ. ರಾಮಮಂದಿರದ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎಂದು ಹೇಳುವ ಮೂಲಕ ಅವರು ವಿವಾದಕ್ಕೆ ಕಾರಣರಾಗಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲೇ ಇಂತಹ ಹೇಳಿಕೆ ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿಯಲ್ಲಿ ಅವರು ಮಾತನಾಡಿದ್ದು, ಕಾಂಗ್ರೆಸ್ನ ಜಿ.ಬಿ.ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜೆ ಶುರು ಮಾಡಿದ್ದರು. ಅಲ್ಲದೇ ಅಲ್ಲಿ ನಮ್ಮ ಮಸೀದಿ ಇತ್ತು, ಇರಲಿದೆ ಕೂಡಾ ಎಂದು ವಿವಾದದ ಕಿಡಿ ಹಚ್ಚಿದ್ದಾರೆ.