ಡಿಸಿಎಂ ಹುದ್ದೆ ಸೃಷ್ಟಿಗೆ ಒಲವು ತೋರದ ಹೈಕಮಾಂಡ್; ಸಚಿವರಿಗೆ ʻಲೋಕʼ ಗೆಲ್ಲೋ ಟಾಸ್ಕ್
ಬೆಂಗಳೂರು; ನಿನ್ನೆ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ 28 ಸಚಿವರ ಜೊತೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಮೀಟಿಂಗ್ ಮಾಡಿದರು. ಈ ವೇಳೆ ಹೆಚ್ಚುವರಿ ಡಿಸಿಎಂಗಳ ನೇಮಕದ ವಿಚಾರ ಚರ್ಚೆಯಾಗುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದ್ರೆ ಆ ಬಗ್ಗೆ ಯಾವುದೇ ಚರ್ಚೆಗೆ ಹೈಕಮಾಂಡ್ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಡಿಸಿಎಂಗಳ ನೇಮಕದ ವಿಚಾರದ ಹೈಕಮಾಂಡ್ ಒಲವು ತೋರಿಸಿಲ್ಲ. ಬದಲಾಗಿ ಸಚಿವರಿಗೆ ಟಾಸ್ಕ್ ನೀಡಿದೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸೋಲಬಾರದು. ಕರ್ನಾಟಕದಿಂದ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು. ಅದಕ್ಕಾಗಿ ಸಚಿವರೆಲ್ಲಾ ಒಗ್ಗಟ್ಟಾಗಿ ಶ್ರಮಿಸಬೇಕು. ಒಂದು ವೇಳೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ ನಿಮ್ಮ ಸಚಿವ ಸ್ಥಾನಗಳಿಗೆ ಕುತ್ತಾಗಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದಾರೆ. ಈ ಮೊದಲು ಹೆಚ್ಚುವರಿ ಡಿಸಿಎಂಗಳ ನೇಮಕವಾದರೆ ಒಳ್ಳೆಯದು ಎಂದು ಪರಮೇಶ್ವರ್ ಹೇಳಿದ್ದರು. ಆದ್ರೆ ಇದೀಗ ತಮ್ಮ ಹೇಳೀಕೆ ಬದಲಿಸಿದ್ದಾರೆ. ಆ ರೀತಿ ಏನಿಲ್ಲ. ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಡಿಸಿಎಂಗಳ ನೇಮಕ ಆಗೋದಿಲ್ಲ ಎಂದಿದ್ದಾರೆ.