CinemaHealthInternational

ವಿಮಾನ ಪತನ; ಹಾಲಿವುಡ್ ನಟ, ಇಬ್ಬರು ಮಕ್ಕಳ ದುರಂತ ಸಾವು

ಕೆರಿಬಿಯನ್ ದ್ವೀಪದ ಬಳಿ ವಿಮಾನ ಪತನಗೊಂಡು ದುರಂತ ನಡೆದಿದೆ. ಘಟನೆಯಲ್ಲಿ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ. ನಟ ಕ್ರಿಸ್ಟಿಯನ್ ಆಲಿವರ್ ಮಕ್ಕಳೊಂದಿಗೆ ಚಾರ್ಟರ್ ವಿಮಾನದಲ್ಲಿ ಸೇಂಟ್ ಲೂಸಿಯಾಗೆ ಹೋಗುತ್ತಿದ್ದರು. ವಿಮಾನ ಬೆಕ್ವಿಯಾ ಬಳಿಯ ಐಲ್ಯಾಂಡ್ ಬಳಿ ಪತನವಾಗಿದೆ.

 

  ನಟ ಕ್ರಿಸ್ಟಿಯನ್ ಆಲಿವರ್ ಗೆ 51 ವರ್ಷ ವಯಸ್ಸಾಗಿತ್ತು. ಮಕ್ಕಳಾದ 10 ವರ್ಷದ ಮದಿತಾ ಕ್ಲೆಪ್ಸರ್ , 12 ವರ್ಷದ ಆನಿಕ್ ಕ್ಲೆಪ್ಸರ್ ಹಾಗೂ ಪೈಲಟ್ ರಾಬರ್ಟ್ ಸ್ಯಾಚ್ಸ್ ಅವರು ಕೂಡಾ

ಮೃತಪಟ್ಟಿದ್ದಾರೆ.

 

 ಅಮೆರಿಕದ ಈ ನಟ ಮೂಲತಃ ಜರ್ಮನ್ ನವರು ಎಂದು ತಿಳಿದುಬಂದಿದೆ. 2008ರಲ್ಲಿ ತೆರೆ ಕಂಡಿದ್ದ ಸ್ಪೀಡ್ ರೇಸರ್ ಚಿತ್ರವು ಸಾಕಷ್ಟು ಮೈಲೇಜ್ ತಂದುಕೊಟ್ಟಿತ್ತು. ದಿ ಗುಡ್ ಜರ್ಮನ್, ಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

Share Post