Bengaluru

ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಹಶಿಕ್ಷಣ ಪದ್ಧತಿ ಜಾರಿ

ಬೆಂಗಳೂರು; ಬೆಂಗಳೂರಿನ ಪ್ರತಿಷ್ಟಿತ ಮಹಿಳಾ ಮಹಾವಿದ್ಯಾಲಯಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮೆಲ್ ಕಾಲೇಜಿ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ವಜ್ರ ಮಹೋತ್ಸವ ಸಂದರ್ಭದಲ್ಲಿ ಕಾಲೇಜು ಆಡಳಿತ ಹೊಸದೊಂದು ನಿರ್ಧಾರ ಮಾಡಿದೆ. ಅದು 2024-25ನೇ ಶೈಕ್ಷಣಿಕ ವರ್ಷದಿಂದ ಸಹ ಶಿಕ್ಷಣ ಆರಂಭಿಸಲಿದೆ. ಈ ಮೂಲಕ ಹುಡುಗರಿಗೂ ಪ್ರವೇಶ ನೀಡುವ ಮೂಲಕ ಸಹ ಶಿಕ್ಷಣಕ್ಕೆ ಬದಲಾಗುತ್ತಿದೆ.

 

ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮುಂತಾದವರು ಓದಿದ ಸಂಸ್ಥೆ ಇದು.

 

ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದ್ದ ಮೌಂಟ್‌ ಕಾರ್ಮೆಲ್‌ ಕಾಲೇಜು ಈಗ ಬದಲಾಗಿದೆ. ಕೆಲವು ವರ್ಷಗಳ ಹಿಂದೆ ಪದವಿ ಕೋರ್ಸ್‌ಗಳಿಗೆ ಬಾಲಕರಿಗೂ ಪ್ರವೇಶ ನೀಡುವ ಮಹತ್ವದ ತೀರ್ಮಾನ ಮಾಡಿದ್ದ ಮೌಂಟ್‌ ಕಾರ್ಮೆಲ್‌ ಕಾಲೇಜು, ಈಗ ಪದವಿಪೂರ್ವ ಕೋರ್ಸ್‌ಗಳಿಗೂ ಬಾಲಕರಿಗೆ ಪ್ರವೇಶ ಒದಗಿಸುವ ತೀರ್ಮಾನ ಮಾಡಿದೆ.

ಕೇರಳದ ತ್ರಿಶೂರ್‌ನಲ್ಲಿರುವ ಕಾರ್ಮೆಲೈಟ್ ಸಿಸ್ಟರ್ಸ್ ಆಫ್ ಸಿಸ್ಟರ್ಸ್ ಆಫ್ ಸೇಂಟ್ ತೆರೇಸಾ ಮಾಲೀಕತ್ವ ಮತ್ತು ಆಡಳಿತದಲ್ಲಿರುವ ಶಿಕ್ಷಣ ಸಂಸ್ತೆಯಾಗಿತ್ತು. ಆರಂಭದಲ್ಲಿ ಇದು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿತ್ತು, 1948 ರಲ್ಲಿ ಇದನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಜುಲೈ 1948 ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಮೌಂಟ್‌ ಕಾರ್ಮೆಲ್‌ ತನ್ನ ತರಗತಿಗಳನ್ನು ಪ್ರಾರಂಭ ಮಾಡಿತ್ತು.  ಮಹಿಳಾ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿತ್ತು. ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದ್ದ ಇದು, 1964ರಲ್ಲಿ ಬೆಂಗಳೂರು ವಿವಿ ವ್ಯಾಪ್ತಿಗೆ ಬಂದಿತು. ಇಂದು ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸುಮಾರು 5,000ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

 

Share Post