Districts

ಅಯೋಧ್ಯೆ ಭದ್ರತೆಗೆ ಉಡುಪಿ ವಿಜ್ಞಾನಿಯ ಟೆಲಿಸ್ಕೋಪ್‌ ತಂತ್ರಜ್ಞಾನ ಬಳಕೆ

ಉಡುಪಿ; ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಇದರ ನಡುವೆ ಭದ್ರತೆಗೂ ಕೂಡಾ ಹೆಚ್ಚಿನ ಗಮನ ಕೊಡಲಾಗಿದೆ. ವಿಶೇಷ ಏನು ಅಂದ್ರೆ, ಉಡುಪಿಯ ವಿಜ್ಞಾನಿಯೊಬ್ಬರು ನಿರ್ಮಾಣ ಮಾಡಿರುವ ಟೆಲಿಸ್ಕೋಪ್‌ ತಂತ್ರಜ್ಞಾನ ರಾಮಮಂದಿರ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

ಮಣಿಪಾಲ ಎಂಐಟಿಯ ಮನೋಹರ್ ಅವರು ಸರಳ ಟೆಲಿಸ್ಕೋಪ್‌ ಒಂದನ್ನು ತಯಾರಿಸಿದ್ದು ಅದಕ್ಕೆ ಪೇಟೆಂಟ್‌ ಕೂಡಾ ಪಡೆದಿದ್ದಾರೆ. ಈ ಟೆಲಿಸ್ಕೋಪ್‌ನ್ನು ಈಗಾಗಲೇ ನಮ್ಮ ದೇಶದ ರಕ್ಷಣಾ ಇಲಾಖೆ ಕೂಡಾ ಬಳಸಿಕೊಳ್ಳುತ್ತಿದೆ. ಇದೀಗ ಅಯೋಧ್ಯೆ ರಾಮಮಂದಿರದ ಭದ್ರತೆಗೂ ಈ ಟೆಲಿಸ್ಕೋಪ್‌ ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ಈ ಟೆಲಿಸ್ಕೋಪ್‌ ಸರಳವಾಗಿದ್ದು, ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾಗಿದೆ. ಈಗಾಗಲೇ ರಕ್ಷಣಾ ಇಲಾಖೆ 50 ಟೆಲಿಸ್ಕೋಪ್ ಗಾಗಿ ಆರ್ಡರ್‌ ಮಾಡಿದೆ. ಈ ಮೊದಲು ರಕ್ಷಣಾ ಇಲಾಖೆ ಜರ್ಮನ್‌ ನಿರ್ಮಿತ ಟೆಲಿಸ್ಕೋಪ್‌ ಗಳನ್ನು ಬಳಸುತ್ತಿತ್ತು. ಅದರ ಬೆಲೆ 30 ಸಾವಿರ ರೂಪಾಯಿ ಇತ್ತು. ಆದ್ರೆ ಮನೋಹರ್‌ ತಯಾರಿಸಿರುವ ಟೆಲಿಸ್ಕೋಪ್‌ ಬೆಲೆ ಕೇವಲ 15 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ.

 

Share Post