BengaluruPolitics

31 ವರ್ಷದ ಕೇಸ್‌ ರಿಓಪನ್‌ ಪ್ರಕರಣ; ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು; 31 ವರ್ಷಗಳ ಹಿಂದೆ ಅಯೋಧ್ಯೆ ವಿಚಾರವಾಗಿ ನಡೆದ ಗಲಭೆ ಪ್ರಕರಣವನ್ನು ರಿಓಪನ್‌ ಮಾಡಿ ಕರಸೇವಕನನ್ನು ಬಂಧಿಸಿರುವುದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. 

1992ರಲ್ಲಿ ಹೋರಾಟ ಮಾಡಿದ್ದ ಕರಸೇವಕರನ್ನು ಈಗ ಬಂಧಿಸಲಾಗಿದೆ. ರಾಮಮಂದಿರ ಉದ್ಘಾಟನೆ ವೇಳೆ ಇದನ್ನು ಸಹಿಸದೇ ಕಾಂಗ್ರೆಸ್‌ ಸರ್ಕಾರ ಕರಸೇವಕರನ್ನು ಬಂಧನ ಮಾಡಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಂಧಿತ ಶ್ರೀಕಾಂತ್‌ ಪೂಜಾರಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದಿದೆ. ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ನಂತರ ಬಂಧಿತ ಶ್ರೀಕಾಂತ್‌ ಪೂಜಾರಿ ಅವರ ನಿವಾಸಕ್ಕೆ ಆರ್‌.ಅಶೋಕ್‌ ಅವರು ಭೇಟಿ ನೀಡಲಿದ್ದಾರೆ.

 

Share Post