BengaluruHealth

ಕೊರೊನಾ ರೂಪಾಂತರಿ; JN1 ಎಂಬುದು ಸೋಶಿಯೋ ಎಕನಾಮಿಕ್ ವೈರಸ್‌

ಬೆಂಗಳೂರು;‌ ಕೇರಳದಲ್ಲಿ ಕೊರೊನಾ ರೂಪಾಂತರಿ ತಳಿ ಜೆಎನ್‌೧ ಹೆಚ್ಚು ಭೀತಿ ಉಂಟುಮಾಡುತ್ತಿದೆ. ಕರ್ನಾಟಕಕ್ಕೂ ಇದು ವಕ್ಕರಿಸಿದೆ. ಹೀಗಾಗಿ ಜನರಲ್ಲಿ ಭೀತಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ಪಾಸಿಟಿವ್‌ ರೇಟ್‌ ಜಾಸ್ತಿಯಾಗುತ್ತಿದ್ದು, ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಹೊಸ ರೂಪಾಯಿ ತಳಿ ಜೆಎನ್‌೧ ನಿಂದ ಏನೆಲ್ಲಾ ತೊಂದರೆ ಇದೆ ಎಂಬುದನ್ನು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಇದು ಒಂದು ಸೋಶಿಯೋ ಎಕಾನಮಿಕ್ ವೈರಸ್. ಇದು ಕೂಡಾ ಅತ್ಯಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅದ್ರಲ್ಲೂ ಈಗ ಚಳಿಗಾಲವಾದ್ದರಿಂದ ಈ ವೈರಸ್‌ ಅತಿಬೇಗ ಎಲ್ಲರನ್ನೂ ಆವರಿಸುತ್ತದೆ. ಹೀಗಾಗಿ ಈ ಬಗ್ಗೆ ಆತಂಕ ಹೆಚ್ಚಾಗುತ್ತಿವೆ. ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಉಂಟುಮಾಡುವ ಇತರ ವೈರಸ್​​ಗಳಿಗೂ ಇದಕ್ಕೆ ಸಾಮ್ಯತೆ ಇದೆ. ಹೊಸ ವರ್ಷಾಚರಣೆ, ಸಂಕ್ರಾಂತಿ ಸಮಯದಲ್ಲಿ ಈ ವೈರಸ್‌ ಹೆಚ್ಚು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ತಜ್ಞರು ಚಳಿಗಾಲದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹೆಚ್ಚಿನ ನಿಗಾ ವಹಿಸಬೇಕು. ಆದ್ರೆ ಇದು ಬಹಳ ಗಂಭೀರ ವೈರಸ್‌ ಏನೂ ಅಲ್ಲ. ಆದರೂ ವೇಗವಾಗಿ ಹರಡುವುದರಿಂದ ಅದು ಹರಡದಂತೆ ತಡೆಯವುದೇ ಒಂದು ಸವಾಲು ಎಂದು ತಜ್ಞರು ಹೇಳಿದ್ದಾರೆ.

 

Share Post