Health

ತೆಲಂಗಾಣದ ಮಹಿಳೆಗೆ ಒಮಿಕ್ರಾನ್‌ ಸೋಂಕು ತಗುಲಿಲ್ಲ

ತೆಲಂಗಾಣ: ಬ್ರಿಟೀಷ್‌ ಏರ್‌ವೇಸ್‌ ಮೂಲಕ ಶಂಷಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 35 ವರ್ಷದ ಮಹಿಳೆಗೆ ಒಮಿಕ್ರಾನ್‌ ನೆಗೆಟಿವ್‌ ಬಂದಿದ್ದು, ತೆಲಂಗಾಣದ ಜನ ನಿಟ್ಟುಸಿರುಬಿಟ್ಟಿದ್ದಾರೆ.

35 ವರ್ಷದ ಮಹಿಳೆ ಇತ್ತೀಚೆಗೆ ಬ್ರಿಟೀಷ್‌ ಏರ್‌ಲೈನ್ಸ್‌ ಮೂಲಕ ಶಂಷಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್‌ ಇರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕ್ವಾರಂಟೀನ್‌ ಮಾಡಲಾಗಿತ್ತು. ಆಕೆಯ ಸ್ಯಾಂಪಲ್‌ ಸಂಗ್ರಹಿಸಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಒಮಿಕ್ರಾನ್‌ ಟೆಸ್ಟ್‌ನಲ್ಲಿ ಆಕೆಗೆ ನೆಗೆಟಿವ್‌ ಬಂದಿದೆ ಎಂದು ತಿಳಿದು ಬಂದಿದೆ.

ವಿದೇಶಗಳಿಂದ ತೆಲಂಗಾಣಕ್ಕೆ ಬಂದ ಇನ್ನೂ 12 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಅವರ ಜಿನೋಮ್‌ ಸೀಕ್ವೆನ್ಸಿಂಗ್‌ ಟೆಸ್ಟ್‌ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post