DistrictsHealth

ಹೃದಯಾಘಾತಕ್ಕೆ ಏಳನೇ ತರಗತಿ ವಿದ್ಯಾರ್ಥಿನಿ ಸಾವು!

ಚಿಕ್ಕಮಗಳೂರು; ಹೃದಯಾಘಾತಗಳು ಮೊದಲು ವಯಸ್ಸಾದವರಿಗೆ ಬರುತ್ತಿತ್ತು. ಆದ್ರೆ ಈಗ ಪುಟ್ಟ ಪುಟ್ಟ ಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿಂದೆ ಇಂತಹ ಘಟನೆಗಳು ಸಾಕಷ್ಟು ನಡೆದಿದ್ದವು. ಇದೀಗ ಶಾಲೆಗೆ ತೆರಳುತ್ತಿದ್ದ ವೇಳೆ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಮೂಡಿಗೆರೆ ತಾಲ್ಲೂಕಿನ ಜೋಗಣ್ಣನ ಕೆರೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹದಿಮೂರು ವರ್ಷದ ಸೃಷ್ಟಿ ಎಂಬ ಏಳನೇ ತರಗತಿ ವಿದ್ಯಾರ್ಥಿನಿಯೇ ಹೃದಯಾಘಾತಕ್ಕೆ ಬಲಿಯಾದವಳು. ಇಂದು ಬೆಳಗ್ಗೆ ಸೃಷ್ಟಿ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ದಾರಿಮಧ್ಯೆಯೇ ಸಾವನ್ನಪ್ಪಿದ್ದಾಳೆ.

ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಪರೀಕ್ಷೆ ಮಾಡಿ ಹೃದಯಾಘಾತದಿಂಧ ಸೃಷ್ಟಿ ಸಾವನ್ನಪ್ಪಿದ್ದಾಳೆ ಅನ್ನೋದನ್ನು ದೃಢಪಡಿಸಿದ್ದಾರೆ.

 

Share Post