CrimeDistricts

ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ; ಪರಸ್ಪರ ವಿಡಿಯೋ ಚಿತ್ರೀಕರಣ!

ಕಲಬುರಗಿ; ಇಬ್ಬರು ಅಪ್ರಾಪ್ತ ಬಾಲಕರು ಸೇರಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಭಯಾನಕ ಕೃತ್ಯ ನಡೆದಿದೆ. ಹತ್ತು ವರ್ಷದ ಬಾಲಕಿಗೆ ಚಾಕು ತೋರಿಸಿ ಅತ್ಯಾಚಾರ ಎಸಗಲಾಗಿದೆ.

14 ಮತ್ತು 16 ವರ್ಷದ ಬಾಲಕರು ಈ ಕೃತ್ಯ ಎಸಗಿದ್ದಾರೆ. ಒಬ್ಬ ಅತ್ಯಾಚಾರ ಮಾಡುವಾಗ ಮತ್ತೊಬ್ಬ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ನಂತರ ಬದಲಾಯಿಸಿಕೊಂಡಿದ್ದಾರೆ. ಪರಸ್ಪರ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಸಂತ್ರಸ್ತ ಬಾಲಕಿಯ ಪೋಷಕರು ಮುಂಬೈನಲ್ಲಿದ್ದಾರೆ. ಹೀಗಾಗಿ ಆ ಬಾಲಕಿ ಸಂಬಂಧಿಕರ ಮನೆಯಲ್ಲಿದ್ದಳು. ಸಂಬಂಧಿಕರು ಆಕೆಯನ್ನು ಓದಿಸುತ್ತಿದ್ದರು.

ಬಾಲಕರು ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಅಡಿ ಪ್ರಕರಣ ದಾಖಲಾಗಿದೆ.

Share Post