ಸಂಸತ್ ಕಲರ್ ಸ್ಮೋಕ್ ಮಾಸ್ಟರ್ ಮೈಂಡ್ ಈತನೇ..!; ಸಿಕ್ಕಿಬಿದ್ದಿದ್ದು ಹೇಗೆ..?
ನವದೆಹಲಿ; ಬುಧವಾರ ಸಂಸತ್ ಕಲಾಪದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಯುವಕರು ಲೋಕಸಭಾ ಕಲಾಪಕ್ಕೆ ನುಗ್ಗಿ ಕಲರ್ ಸ್ಮೋಕ್ ಸ್ಪ್ರೇ ಮಾಡಿದ್ದರು. ಈ ಪ್ರಕರಣದ ಮಾಸ್ಟರ್ ಮೈಂಡ್ ಈಗ ಸಿಕ್ಕಿಬಿದ್ದಿದ್ದಾನೆ. ದೆಹಲಿ ಪೊಲೀಸರು ಪ್ರಕರಣ ಮಾಸ್ಟರ್ ಮೈಂಡ್ ಲಲಿತ್ ಝಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಲಲಿತ್ ಝಾ ಕೋಲ್ಕತ್ತಾ ಮೂಲದ ಶಿಕ್ಷಕ ಎಂದು ತಿಳಿದುಬಂದಿದೆ. ಈ ಪ್ರಕರಣದ ನಂತರ ಲಲಿತ್ ಝಾ ನಾಪತ್ತೆಯಾಗಿದ್ದ. ಎರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಲಲಿತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ವಿಧಿಯಿಲ್ಲದೆ ಲಲಿತ್ ಝಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಆರು ಮಂದಿ ಭಾಗಿಯಾಗಿದ್ದರು. ಇದರಲ್ಲಿ ಐದು ಮಂದಿಯನ್ನು ಬುಧವಾರವೇ ಬಂಧಿಸಲಾಗಿತ್ತು. ಸಾಗರ್, ಮನೋರಂಜನ್, ಅಮೋಲ್, ನೀಲಂ ಹಾಗೂ ವಿಶಾಲ್‌ನನ್ನು ಬಂಧಿಸಲಾಗಿತ್ತು. ಇದರಲ್ಲಿ ವಿಶಾಲ್ ಗುರುಗ್ರಾಮದಲ್ಲಿ ವಾಸವಿದ್ದು, ಆತನ ಮನೆಯಲ್ಲೇ ಎಲ್ಲರೂ ಆ ದಿನ ತಂಗಿದ್ದರು ಎಂದು ತಿಳಿದುಬಂದಿದೆ.