CrimeDistricts

ಲೋಕಸಭೆಗೆ ಯುವಕರು ನುಗ್ಗಿದ ಪ್ರಕರಣ; ನನ್ನ ಮಗನನ್ನು ಗಲ್ಲಿಗೇರಿಸಲಿ ಎಂದ ತಂದೆ

ಮೈಸೂರು; ಇಂದು ಮಧ್ಯಾಹ್ನ ಲೋಕಸಭಾ ಕಲಾಪದ ವೇಳೆ ಇಬ್ಬರು ಯುವಕರು ಗ್ಯಾಲರಿಯಿಂದ ಕಲಾಪ ಸ್ಥಳಕ್ಕೆ ನುಗ್ಗಿದ್ದರು. ಅವರನ್ನು ಗುರುತಿಸಲಾಗಿದ್ದು, ಸಾಗರ್‌ ಹಾಗು ಮನೋರಂಜನ್‌ ಎಂದು ತಿಳಿದುಬಂದಿದೆ. ಮನೋರಂಜನ್‌ ಮೈಸೂರಿನವನಾಗಿದ್ದು, ವಿಜಯನಗರದಲ್ಲಿ ಆತನ ನಿವಾಸವಿದೆ. ಪೊಲೀಸರು ಮನೋರಂಜನ್‌ ನಿವಾಸಕ್ಕೆ ಭೇಟಿ ನೀಡಿ ಆತನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ಇದೇ ವೇಳೆ ಮನೋರಂಜನ್‌ ತಂದೆ ದೇವರಾಜೇಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನನ್ನ ಮಗ ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಲಿ. ಸಮಾಜದಲ್ಲಿ ನನ್ನ ಮಗ ತಪ್ಪು ಮಾಡಿದ್ದರೆ ಆತ ನನ್ನ ಮಗನೇ ಅಲ್ಲ ಎಂದು ಹೇಳಿದ್ದಾರೆ. ಮನೋರಂಜನ್‌ ಬಿಪಿ ಮುಗಿಸಿದ್ದ. ದೇವೇಗೌಡರು ಆತನಿಗೆ ಸೀಟು ಕೊಡಿಸಿದ್ದರು. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆದ್ರೆ ನನ್ನ ಮಗ ದೆಹಲಿ, ಬೆಂಗಳೂರು ಅಂತ ಸುತ್ತಾಡುತ್ತಿದ್ದ. ಆತ ದೆಹಲಿಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

Share Post