BengaluruCrime

ಖಾಸಗಿ ಶಾಲೆಗಳಾಯ್ತು ಈಗ ರಾಜಭವನಕ್ಕೂ ಬಂತು ಬಾಂಬ್‌ ಬೆದರಿಕೆ

ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿತ್ತು. ಸುಮಾರು 60ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್‌ ಇಡಲಾಗುವುದು ಎಂದು ಬೆದರಿಕೆ ಹಾಕಿದ್ದರು.  ಇದೀಗ ನೇರವಾಗಿ ರಾಜಭವನಕ್ಕೇ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪರಿಚಿತರು ಕಳೆದ ರಾತ್ರಿ 11.30ರ ಸುಮಾರಿಗೆ ರಾಜಭವನಕ್ಕೆ ಕರೆ ಮಾಡಿದ್ದು, ಬಾಂಬ್‌ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಕೂಡಲೇ ರಾಜಭನವದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಬಾಂಬ್‌ ಸ್ವ್ಕಾಡ್‌ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಇದು ಹುಸಿ ಬಾಂಬ್‌ ಕರೆ ಎಂಬುದು ಗೊತ್ತಾಗಿದೆ.

ಪೊಲೀಸರು ಎಲ್ಲಿಂದ ಕರೆ ಬಂದಿದೆ, ಕರೆ ಮಾಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 

Share Post