DistrictsPolitics

ಬೇಲೂರಿನಲ್ಲಿ ಕಾಂಗ್ರೆಸ್‌ನ ಎರಡು ಗುಂಪುಗಳ ನಡುವೆ ಬಡಿದಾಟ; ಕಾರಣವೇನು ಗೊತ್ತಾ..?

ಹಾಸನ; ಕಾಂಗ್ರೆಸ್‌ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಾಸನ ಜಿಲ್ಲೆ ಬೇಳೂರಿನಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಕಿತ್ತಾಟ ನಡೆದಿದ್ದು, ಕೆಲವರು ಕೈಕೈ ಮಿಲಾಯಿಸಿದ ಘಟನೆಯೂ ನಡೆದಿದೆ. 

ಮಾಜಿ ಸಚಿವ ಬಿ ಶಿವರಾಂ ಅವರು ಬೇಲೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜನೆ ಮಾಡಿದ್ದರು. ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಅವರು ಕೂಡಾ ಈ ಸಭೆಗೆ ಬಂದಿದ್ದರು. ಇನ್ನೊಂದೆಡೆ ಕಳೆದ ವಿದಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಥಳೀಯ ಮುಖಂಡ ಗ್ರಾನೈಟ್ ರಾಜಶೇಖರ್  ಕೂಡಾ ಇದ್ದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ ಅವರು ಬೇಲೂರಿನಲ್ಲಿ ಕಾಂಗ್ರೆಸ್‌ ಸೋಲೋದಕ್ಕೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಕಾರಣ ಎಂದು ಹೇಳಿದರು. ಈ ವೇಳೆ ರಾಜಶೇಖರ್‌ ಬೆಂಬಲಿಗರು ಕೆರಳಿದ್ದಾರೆ. ಶಿವರಾಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ಎರಡೂ ಬಣಗಳ ನಡುವೆ ಮಾತಿನಚಕಮಕಿ ನಡೆದಿದ್ದು, ಕೈಕೈ ಮಿಲಾಯಿಸಿದ್ದಾರೆ. ಕುರ್ಚಿಗಳನ್ನು ಹಿಡಿದು ಹೊಡೆದಾಡಿದ್ದಾರೆ, ಹಲವಾರು ಕುರ್ಚಿಗಳನ್ನು ಒಡೆದುಹಾಕಲಾಗಿದೆ.

 

Share Post