CrimeEconomyNational

ಮದ್ಯ ಕಂಪನಿ ಮೇಲೆ ಐಟಿ ರೇಡ್‌; 200 ಕೋಟಿ ರೂ. ಹಣ ಎಣಿಸಿ, ಎಣಿಸಿ ಯಂತ್ರಗಳೇ ಸುಸ್ತು..!

ನವದೆಹಲಿ; ನೋಟುಗಳನ್ನು ಎಣಿಸಿ, ಎಣಿಸಿ ಜನ ಸುಸ್ತಾಗೋದನ್ನು ನೋಡಿದ್ದೇವೆ. ಯಂತ್ರಗಳು ಸುಸ್ತಾಗೋದು ನೋಡಿದ್ದೀರಾ..?. ಹೌದು ಎನ್ನೋದಕ್ಕೆ ಈ ಸುದ್ದಿಯೇ ಒಂದು ಉದಾಹರಣೆ. ಇಲ್ಲಿ ಹಣ ಎಣಿಸುವ ಯಂತ್ರಗಳು 200 ಕೋಟಿ ರೂಪಾಯಿ ಎಣಿಸಿ, ಎಣಿಸಿ ಸಾಕಾಗಿ ಕೆಟ್ಟು ನಿಂತಿವೆ. 

ಈ ಘಟನೆ ನಡೆದಿರೋದು ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ. ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಭಾರಿ ಪ್ರಮಾಣದ ನಗದು ಸಿಕ್ಕಿದೆ. ಜಪ್ತಿ ಮಾಡಲಾದ ನಗದು ಬರೋಬ್ಬರಿ 200 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಈ ಹಣವನ್ನು ಎಣಿಸಲು ಹಲವು ಹಣ ಎಣಿಸುವ ಮಷಿನ್‌ಗಳನ್ನು ತರಿಸಲಾಗಿತ್ತು. ಹಣವನ್ನು ಎಣಿಸಿ, ಎಣಿಸಿ ಸಾಕಾಗಿ ಆ ಯಂತ್ರಗಳು ಕೆಟ್ಟು ನಿಂತಿವೆ ಎಂದು ತಿಳಿದುಬಂದಿದೆ. ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ ಮೇಲೆ ತೆರಿಗೆ ವಂಚನೆ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಬಿಡಿಪಿಎಲ್ ಗೆ ಸೇರಿದ ಕೋಲ್ಕತ್ತಾ ಮತ್ತು ರಾಂಚಿಯಲ್ಲಿನ ನೋಂದಾಯಿತ ಕಚೇರಿಗಳು ಸೇರಿದಂತೆ ಬೌಧ್, ಬೋಲಂಗಿರ್, ರಾಯ್‌ಗಢ ಮತ್ತು ಸಂಬಲ್‌ಪುರದಲ್ಲಿನ ಡಿಸ್ಟಿಲರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಆದಾಯದ ವಿವರಗಳಲ್ಲಿ 2019-2021ರ ಮಧ್ಯದಲ್ಲಿ ತೋರಿಸಲಾದ ಮಾಹಿತಿ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅನುಮಾಸ್ಪ ಪಾವತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ.

 

 

Share Post