CrimeDistrictsPolitics

ಕಾರು ಅಪಘಾತವನ್ನೇ ಹಲ್ಲೆ ಎಂದು ನಂಬಿಸಿದ್ದ ಬಿಜೆಪಿ ಮುಖಂಡನ ಮುಖವಾಡ ಬಯಲು!

ಕಲಬುರಗಿ; ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲಿನ ಮಾರಣಾಂತಿಕ ಹಲ್ಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಮಣಿಕಂಠ ಮಾಡಿದ ನಾಟಕ ಬಟಾಬಯಲಾಗಿದೆ. ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಣಿಕಂಠ ರಾಠೋಡ್, ಸಚಿವ ಪ್ರಿಯಾಂಕ್ ಖರ್ಗೆ ಕಡೆಯವರು ಹಲ್ಲೆ ನಡೆಸಿದ್ದಾರೆಂದು ಕಥೆ ಕಟ್ಟಿದ್ದ. ಮಣಿಕಂಠ ರಾಠೋಡ್‌ನ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾನೆ. ಅನಂತರ ಹಲ್ಲೆ ಎಂದು ಕಥೆ ಕಟ್ಟಲಾಗಿದೆ ಎಂಬ ವಿಚಾರ ಬಯಲಾಗಿದೆ.

ನವೆಂಬರ್‌ 18ರಂದು ಮಧ್ಯಾರಾತ್ರಿ ಪ್ರಿಯಾಂಕ್‌ ಖರ್ಗೆಯವರ ಬೆಂಬಲಿಗರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ. ಆದ್ರೆ ಈ ನಡೆದಿದ್ದೇನು ಅನ್ನೋದು ಬಯಲಾಗಿದೆ. ಶಹಬಾದ್ ಪೊಲೀಸರು ಅಸಲಿ ಸತ್ಯವನ್ನು ಬಯಲು ಮಾಡಿದ್ದಾರೆ.

ನವೆಂಬರ್‌ 18ರಂದು ಮಧ್ಯರಾತ್ರಿ ಮಣಿಕಂಠ ರಾಠೋಡ್ ಇನ್ನೋವಾ ಕ್ರಿಸ್ಟಾ ವೈಟ್ ಕಲರ್ ಕಾರಿನಲ್ಲಿ ತೆರಳುತ್ತಿದ್ದಾಗ ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ಮರವೊಂದಕ್ಕೆ ಡಿಕ್ಕಿಯಾಗಿದ್ದರಿಂದ ಮಣಿಕಂಠ ರಾಠೋಡ್‌ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಮಣಿಕಂಠ ರಾಠೋಡ್‌ ತನ್ನ ಇನ್ನೊಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಅಪಘಾತಗೊಂಡ ಇನ್ನೋವಾ ಕ್ರಿಸ್ಟಾ ಕಾರನ್ನು ಟೋಯಿಂಗ್ ಮೂಲಕ ರಾತ್ರೋ ರಾತ್ರಿ ಹೈದರಾಬಾದ್ ಶಿಫ್ಟ್ ಮಾಡಿಸಿದ್ದಾನೆ.

ಇನ್ನು ಮತ್ತೊಂದು ಕಾರಿನಲ್ಲಿ ತೆರಳುತ್ತಿರುವಾಗಿ ಮಣಿಕಂಠ ಭಾರಿ ಪ್ಲ್ಯಾನ್‌ ಒಂದರನ್ನು ರೂಪಿಸಿದ್ದಾನೆ. ತಾನೇ ಕಾರಿನ ಗಾಜುಗಳನ್ನು ಒಡೆದು ಹಾಕಿ ಏಳೆಂಟು ದುಷ್ಕರ್ಮಿಗಳು ಕಾರಿಗೆ ಅಡ್ಡಹಾಕಿ ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದಾನೆ. ಚಿತ್ತಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾನೆ. ಆದ್ರೆ ಮಣಿಕಂಠ ರಾಠೋಡ್‌, ಹಲ್ಲೆಯಾಗಿದೆ ಎಂದು ಹೇಳಿದ ಕಾರಿನಲ್ಲಿ ಒಂದು ಹನಿ ಕೂಡಾ ರಕ್ತ ಕಂಡುಬಂದಿರಲಿಲ್ಲ. ಹೀಗಾಗಿ ಪೊಲೀಸರಿಗೆ ಅನುಮಾನ ಮೂಡಿತ್ತು.

ಹೀಗಾಗಿ, ಮಣಿಕಂಠ ರಾಠೋಡ್ ಕಾಲ್ ರೆಕಾರ್ಡ್ ಹಿಸ್ಟರಿ ತೆಗೆದು ನೋಡಿದ್ದಾರೆ. ಅದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ಪೊಲೀಸರಿಗೆ ನಿಜ ವಿಷಯ ಗೊತ್ತಾಗಿದೆ.

 

Share Post