ಸ್ನೇಹಿತರ ಜೊತೆ ಸ್ವಂತ ತಂಗಿಯನ್ನೇ ಅತ್ಯಾಚಾರವೆಸಗಿದ ದುರುಳ ಅಣ್ಣ..!
ಒಡಿಶಾ; ಅಣ್ಣ ಎಂದರೆ ಯಾವಾಗಳು ತಂಗಿಗೆ ಆಸೆಯಾಗಿರುತ್ತಾನೆ. ಆದ್ರೆ ಇಲ್ಲೊಬ್ಬ ತಂಗಿಗೆ ಅಣ್ಣನೇ ಯಮಕಿಂಕರನಾಗಿದ್ದಾನೆ. ನಾಲ್ವರು ಸ್ನೇಹಿತರ ಜೊತೆ ಸೇರಿಕೊಂಡು ಸ್ವಂತ ಅಣ್ಣನೇ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅನಂತರ ಎಲ್ಲರೂ ಸೇರಿ ಆಕೆಯನ್ನು ಕೊಲೆ ಮಾಡಲಾಗಿದೆ. ಇಂತಹ ಅಮಾನುಷ ಘಟನೆ ನಡೆದಿರೋದು ಒಡಿಶಾದ ಕಂಧಮಾಲ್ ಜಿಲ್ಲೆಯ ಚಾಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡೊಂದರಲ್ಲಿ..
ಯುವತಿ ತನ್ನ ಅಣ್ಣ ಬೇರೊಬ್ಬಳ ಜೊತೆ ಸಂಬಂಧ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾಳೆ. ಅಣ್ಣನಿಗೆ ಮದುವೆಯಾಗಿದ್ದರೂ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನ್ನು ನೋಡಿ ತಂಗಿ ಕೋಪಗೊಂಡಿದ್ದಾಳೆ. ಇನ್ನೊಮ್ಮೆ ಇಂತಹ ತಪ್ಪು ಆಗಬಾರದೆಂದು ಎಚ್ಚರಿಸಿದ್ದಾಳೆ. ಇದರಿಂದ ತಂಗಿಯ ಮೇಲೆ ಕೋಪಗೊಂಡಿದ್ದ ಅಣ್ಣ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಎಲೆಗಳನ್ನು ಸಂಗ್ರಹ ಮಾಡಲು ತಂಗಿ ಕಾಡಿಗೆ ಬಂದಿದ್ದಳು. ಇದೇ ವೇಳೆ ಆಕೆಯ ಅಣ್ಣ ಕೂಡಾ ದನಗಳನ್ನು ಮೇಯಿಸುತ್ತಾ ಅಲ್ಲಿಗೆ ಬಂದಿದ್ದಾನೆ. ಇದೇ ಒಳ್ಳೆಯ ಸಮಯ ಎಂದು ಅರಿತ ಆತ, ತನ್ನ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ. ಐವರೂ ಸೇರಿ ಆಕೆಯ ಮೇಲೆ ಮುಗಿಬಿದಿದ್ದಾರೆ. ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ್ದಾರೆ. ಪೊಲೀಸರು ಈಗ ಐವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.