CinemaDistricts

ಚಾಮುಂಡೇಶ್ವರಿ ದರ್ಶನ ಪಡೆದ ನಟ ರಾಮ್‌ಚರಣ್‌

ಮೈಸೂರು; ತೆಲುಗಿನ ಖ್ಯಾತ ನಟ ರಾಮ್​ ಚರಣ್ ಅವರು ಕೆಲ ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿರುವ ಅವರ ಗೇಮ್‌ ಚೇಂಜರ್‌ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಅವರು ಇಂದು ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು. ಚಾಮುಂಡೇಶ್ವರಿಯ ದರ್ಶನ ಪಡೆದರು.

ಈ ಸಮಯದಲ್ಲಿ ಗೇಮ್‌ ಚೇಂಜರ್‌ ಚಿತ್ರತಂಡ ಕೂಡಾ ರಾಮ್‌ ಚರಣ್‌ ಜೊತೆಗಿತ್ತು.  ಹಲವು ದಿನಗಳಿಂದ ನಟ ರಾಮ್​ ಚರಣ್​ ಅವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮತದಾನ ಮಾಡಲು ಹೈದರಾಬಾದ್‌ಗೆ ತೆರಳಿದ್ದ ರಾಮ್‌ ಚರಣ್‌ ಮತ್ತೆ ಶೂಟಿಂಗ್‌ಗೆ ಆಗಮಿಸಿದ್ದು, ಈ ನಡುವೆ ಅವರು ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

Share Post