Bengaluru

ಕಚಡ ಗಾಡಿ ತೆಗೋಬೇಡಿ; ಹೀಗಂತ ಆಟೋ ಮೇಲೆ ಬರೆದ ಓಡಾಟ!

ಬೆಂಗಳೂರು; ಇತ್ತೀಚೆಗೆ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಹೆಚ್ಚಾಗಿ ಓಡಾಡುತ್ತಿವೆ. ಇದರ ನಡುವೆ ಈ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಹಲವು ಆರೋಪಗಳಿವೆ. ಈ ನಡುವೆ ಎಲೆಕ್ಟ್ರಿಕ್‌ ಆಟೋ ಕೊಂಡಿದ್ದ ವ್ಯಕ್ತಿಯೊಬ್ಬ, ಆ ಆಟೋದ ಮೇಲೆ ಕಚಡ ಗಾಡಿ ತೆಗೋಬೇಡಿ ಎಂದು ಬರೆದುಕೊಂಡು ಓಡಾಡುತ್ತಿದ್ದಾನೆ. 

ಆಶಿಶ್​ ಕೃಪಾಕರ್ ಈ ಆಟೋ ಫೋಟೋ ತೆಗೆದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ, ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ‘ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳಲು ಎಂತಹ ನವೀನ ಮಾರ್ಗ’ ಎಂದು ಟ್ವಿಟರ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆದ್ರೆ ಆಟೋ ಚಾಲಕ ಯಾಕೆ ಆಟೋದ ಮೇಲೆ ಹೀಗೆ ಬರೆದಿದ್ದಾನೋ ಗೊತ್ತಿಲ್ಲ. ಆ ಆಟೋದಲ್ಲಿ ಯಾವ ಸಮಸ್ಯೆ ಕಂಡುಬಂದಿಯೋ ಅನ್ನೋದೂ ಗೊತ್ತಿಲ್ಲ.

 

Share Post