BengaluruPolitics

ಸಿಎಂ ನಿವಾಸದ ಮೀಟಿಂಗ್‌ ಹಾಲ್‌ ಉದ್ಘಾಟನೆ; ಟೇಪ್‌ ಕತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಇಟ್ಟುಕೊಂಡಿದ್ದರು. ಇದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ 14ಕ್ಕೂ ಹೆಚ್ಚು ಮಂತ್ರಿಗಳು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಒಂದಷ್ಟು ಸ್ವಾರಸ್ಯಕರ ಘಟನೆಗಳು ನಡೆದಿವೆ. ಮೀಟಿಂಗ್‌ನೂ ಮುಂಚೆ ಸಿಎಂ ನಿವಾಸದಲ್ಲಿರುವ ಮೀಟಿಂಗ್‌ ಹಾಲ್‌ನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಕೈಯಲ್ಲಿ ಉದ್ಘಾಟನೆ ಮಾಡಿಸಲಾಯಿತು. ಈ ವೇಳೆ ನಡೆದ ಸನ್ನಿವೇಶ ಸ್ವಾರಸ್ಯಕರವಾಗಿತ್ತು.

ಸಿಎಂ ಸಿದ್ದರಾಮಯ್ಯ ಅವರು, ಕತ್ತರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕೈಗೆ ಕೊಟ್ಟು ಟೇಪ್‌ ಕತ್ತರಿಸುವಂತೆ ಸೂಚಿಸಿದರು. ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರ ನನ್ನ ಕೈಯಲ್ಲಿ ಟೇಪ್‌ ಕಟ್‌ ಮಾಡಿಸ್ತೀರಾ..? ಎಂದು ಕೇಳಿದರು. ಅದಕ್ಕೆ ಸಿದ್ದರಾಮಯ್ಯ ಅವರು ಹೌದಪ್ಪ ಎಂದು ನಗುತ್ತಾ ಹೇಳಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್‌ ಅವರ ಸಚಿವ ಎಂ.ಬಿ.ಪಾಟೀಲ್‌ ನಿಂತಿದ್ದರು. ಅವರನ್ನು ರಾಜಣ್ಣ ಎಲ್ಲಪ್ಪ ಎಲ್ಲಿ ಎಂದು ಕೇಳಿದರು. ನಿನ್ನೆಯಷ್ಟೇ ರಾಜಣ್ಣ ಅವರು ತುಮಕೂರಿನಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಬದಲಾವಣೆ ಆಗುತ್ತೆ ಅಂದ್ರೆ ಪರಮೇಶ್ವರ್‌ ಸಿಎಂ ಆಗಲಿ ಎಂದಿದ್ದರು. ಈ ಕಾರಣಕ್ಕೋ ಏನೋ ಡಿ.ಕೆ.ಶಿವಕುಮಾರ್‌ ಅವರು ರಾಜಣ್ಣ ಅವರ ಬಗ್ಗೆ ಕೇಳಿದರು ಅನಿಸುತ್ತೆ. ಇದೇ ವೇಳೆ ಹಿಂದೆ ಇದ್ದ ಸಚಿವ ಕೆ.ಎನ್‌.ರಾಜಣ್ಣ ಅವರು, ಏಯ್‌ ನೋಡಿ ನಮ್ಮನ್ನು ಹೇಗೆ ತಳ್ತಾರೆ ಅಂತ ಹೇಳಿದರು.

ಇನ್ನು ಎಲ್ಲರೂ ಕ್ಲ್ಯಾಪ್ಸ್‌ ಹೊಡೀರಿ ಎನ್ನುತ್ತಲೇ ಟೇಪ್‌ ಕತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ನಮ್ಮ ಪಿಡಬ್ಲ್ಯೂಡಿ ಮಿನಿಸ್ಟರ್‌ ಎಲ್ಲಿ ಎಂದು ಹೇಳಿದರು. ಪಿಡಬ್ಲ್ಯೂಡಿ ಮಿನಿಸ್ಟರ್‌ ಸತೀಶ್‌ ಜಾರಕಿಹೊಳಿ ಈ ಸಭೆಗೆ ಗೈರಾಗಿದ್ದರು. ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲೇ ಸಭೆಗೆ ಹಾಜರಾಗಲು ಆಗಲ್ಲ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.

Share Post