ನೇಪಾಳದಲ್ಲಿ ಭಾರೀ ಭೂಕಂಪ, 128 ಸಾವು; ಮಲಗಿದಲ್ಲೇ ಪ್ರಾಣ ಬಿಟ್ಟ ಜನ!
ಕಠ್ಮಂಡು; ಶುಕ್ರವಾರ ರಾತ್ರಿ ಪಶ್ಚಿಮ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ. 140 ಜನರು ಗಾಯಗೊಂಡಿದ್ದಾರೆಂದು ನೇಪಾಳದ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಲಿ ರಾಜ್ಯದ ಜಜರ್ಕೋಟ್ ಮತ್ತು ರುಕುಮ್ ಪಶ್ಚಿಮ ಜಿಲ್ಲೆಗಳು ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ನೇಪಾಳ ಪೊಲೀಸ್ ವಕ್ತಾರ ಕುಬೇರ್ ಕಡಯತ್ ಬಿಬಿಸಿಗೆ ತಿಳಿಸಿದ್ದಾರೆ. ಇಲ್ಲಿ ಅನೇಕ ಮನೆಗಳು ನಾಶವಾಗಿವೆ.
ರಾಷ್ಟ್ರೀಯ ಭೂಕಂಪನ ಕೇಂದ್ರವು ಶುಕ್ರವಾರ ರಾತ್ರಿ 11:47 ಕ್ಕೆ ಭೂಕಂಪ ಸಂಭವಿಸಿದೆ ಮತ್ತು ಭೂಕಂಪನವು ಜಜರ್ಕೋಟ್ ಎಂದು ತಿಳಿಸಿದೆ. ಶುಕ್ರವಾರ ರಾತ್ರಿ ಪಶ್ಚಿಮ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ. 140 ಜನರು ಗಾಯಗೊಂಡಿದ್ದಾರೆ. ನೇಪಾಳದ ಅಧಿಕಾರಿಗಳು ಇದನ್ನು ಹೇಳಿದ್ದಾರೆ.
ಕರ್ನಾಲಿ ರಾಜ್ಯದ ಜಜರ್ಕೋಟ್ ಮತ್ತು ರುಕುಮ್ ಪಶ್ಚಿಮ ಜಿಲ್ಲೆಗಳು ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ನೇಪಾಳ ಪೊಲೀಸ್ ವಕ್ತಾರ ಕುಬೇರ್ ಕಡಯತ್ ಬಿಬಿಸಿಗೆ ತಿಳಿಸಿದ್ದಾರೆ. ಇಲ್ಲಿ ಅನೇಕ ಮನೆಗಳು ನಾಶವಾಗಿವೆ. ರಾಷ್ಟ್ರೀಯ ಭೂಕಂಪನ ಕೇಂದ್ರವು ಶುಕ್ರವಾರ ರಾತ್ರಿ 11:47 ಕ್ಕೆ ಭೂಕಂಪ ಸಂಭವಿಸಿದೆ ಮತ್ತು ಭೂಕಂಪನವು ಜಜರ್ಕೋಟ್ ಎಂದು ತಿಳಿಸಿದೆ. ಜುಮ್ಲಾದಿಂದ ದಕ್ಷಿಣಕ್ಕೆ 42 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ಭೂಕಂಪದ ತೀವ್ರತೆ 5.6ರಷ್ಟಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.
2015ರ ಭೂಕಂಪದ ನಂತರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಭೂಕಂಪದಿಂದಾಗಿ ನೇಪಾಳದ ಬಹುತೇಕ ಭಾಗಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ನೇಪಾಳ ಪೊಲೀಸ್ ಅಧಿಕಾರಿಗಳು, ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸರು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೇಪಾಳದ ವಿವಿಧ ಭಾಗಗಳಲ್ಲಿ ಹಾಗೂ ದೆಹಲಿ ಮತ್ತು ಭಾರತದ ಕೆಲವು ಸ್ಥಳಗಳಲ್ಲಿ ಕೂಡಾ ಕಂಪನದ ಅನುಭವವಾಗಿದೆ.