DistrictsPolitics

ಸ್ವಾಭಿಮಾನವನ್ನೂ ಬಿಡಲ್ಲ, ಮಂಡ್ಯವನ್ನೂ ಬಿಟ್ಟುಕೊಡೋದಿಲ್ಲ; ಸಂಸದೆ ಸುಮಲತಾ!

ಮಂಡ್ಯ; ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಮತ್ತೆ ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾರೆ. ಮಂಡ್ಯವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ ಅನ್ನೋ ಮಾತನ್ನಾಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಅವರು, ನಾನು ಮಂಡ್ಯದ ಸೊಸೆಯಾಗಿದ್ದು, ಯಾವತ್ತಿಗೂ ನಾನು ಮಂಡ್ಯವನ್ನು ಬಿಡೋದಿಲ್ಲ. ಬೇಕಾದರೆ ರಾಜಕಾರಣ ಬಿಡುತ್ತೇನೆ, ಆದ್ರೆ ಸ್ವಾಭಿಮಾನ ಹಾಗೂ ಸಿದ್ಧಾಂತ ಬಿಡೋದಿಲ್ಲ ಎಂದಿದ್ದಾರೆ.

ಅಂಬರೀಶ್‌ ಕುಟುಂಬದಕ್ಕೆ ಮಂಡ್ಯ ಜನ ಬಹಳ ಪ್ರೀತಿ ತೋರಿಸಿದ್ದಾರೆ. ಹೀಗಾಗಿ ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗೋದಿಲ್ಲ. ಜೆಡಿಎಸ್‌-ಬಿಜೆಪಿ ಮೈತ್ರಿ ಆಗಿದೆ ನಿಜ. ಆದ್ರೆ ಸೀಟು ಇನ್ನೂ ಹಂಚಿಕೆಯಾಗಿಲ್ಲ. ಹೀಗಾಗಿ ನಾನು ಯಾವುದೇ ದುಡುಕಿನ ನಿರ್ಧಾರ ಮಾಡೋದಿಲ್ಲ ಅಂತ ಸುಮಲತಾ ಅವರು ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಆಫರ್‌ ಬಂದಿತ್ತು. ಆದ್ರೆ ನಾನು ಅದನ್ನು ನಿರಾಕರಣೆ ಮಾಡಿದ್ದೆ. ನನಗೆ ಸ್ಥಾನಮಾನ ಕೊಟ್ಟಿದ್ದು ಮಂಡ್ಯ. ಹೀಗಾಗಿ ನಾನು ಮಂಡ್ಯ ಬಿಡೋದಿಲ್ಲ. ಇದನ್ನು ನೂರು ಬಾರಿ ಹೇಳಿದ್ದೇನೆ. ಇನ್ನೂ ರಕ್ತದಲ್ಲಿ ಬರೆದುಕೊಡಬೇಕಾ..? ಎಂದು ಸುಮಲತಾ ಪ್ರಶ್ನೆ ಮಾಡಿದ್ದಾರೆ.

 

Share Post