LifestyleNationalPolitics

ತೆಲಂಗಾಣ ಸಿಎಂ ಚಂದ್ರಶೇಖರರಾವ್‌ರಿಂದ ರಾಜ ಶ್ಯಾಮಲ ಯಾಗ; ಈ ಯಾಗ ಮಾಡಿದ್ರೆ ಗೆಲ್ತಾರಾ..?

ಹೈದರಾಬಾದ್‌; ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇದೇ ಮೂವತ್ತರಂದು ಅಲ್ಲಿ ಮತದಾನ ನಡೆಯಲಿದೆ. ಹೀಗಿರುವಾಗಲೇ ತೆಲಂಗಾಣ ಸಿಎಂ ಹಾಗೂ ಬಿಆರ್‌ಎಸ್‌ ಪಕ್ಷದ ಮುಖ್ಯಸ್ಥ ಚಂದ್ರಶೇಖರರಾವ್‌ ಯಾಗವೊಂದನ್ನು ಕೈಗೊಂಡಿದ್ದಾರೆ. ಅವರ ಫಾರ್ಮ್‌ ಹೌಸ್‌ನಲ್ಲಿ ಬುಧವಾರದಿಂದ ಯಾನ ನಡೆಯುತ್ತಿದ್ದು, ಶುಕ್ರವಾರ ಅಂತ್ಯವಾಗಲಿದೆ. ಅಂದಹಾಗೆ ಈ ಹಿಂದಿನ ಚುನಾವಣಾ ಸಮಯದಲ್ಲೂ ಚಂದ್ರಶೇಖರರಾವ್‌ ಅವರು ರಾಜಶ್ಯಾಮಲ ಯಾಗವನ್ನು ಕೈಗೊಂಡಿದ್ದರು. ಆ ಚುನಾವಣೆಯಲ್ಲಿ ಚಂದ್ರಶೇಖರರಾವ್‌ ನೇತೃತ್ವದ ಆಗಿನ ಟಿಆರ್‌ಎಸ್‌ ಪಕ್ಷ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಈ ಬಾರಿಯೂ ರಾಜ ಶ್ಯಾಮಲ ಯಾಗ ಮಾಡಿಸುತ್ತಿದ್ದಾರೆ. 

ಸಿದ್ದಿಪೇಟೆ ಜಿಲ್ಲೆಯ ಮರ್ಕೂಕ್ ಮಂಡಲದ ಎರ್ರವಳ್ಳಿಯಲ್ಲಿ ಚಂದ್ರಶೇಖರರಾವ್‌ ಅವರು ಫಾರ್ಮ್‌ ಹೌಸ್‌ ಹೊಂದಿದ್ದಾರೆ. ಅಲ್ಲಿ ನವೆಂಬರ್ 1 ರಿಂದ ಮೂರು ದಿನಗಳ ಕಾಲ ರಾಜಶ್ಯಾಮಲ ಯಾಗ ನಡೆಸುತ್ತಿದ್ದಾರೆ.  ವಿಶಾಖ ಶಾರದಾ ಪೀಠಾಧಿಪತಿ ಸ್ವರೂಪಾನಂದೇಂದ್ರ ಮತ್ತು ಸ್ವಾತ್ಮಾನಂದೇಂದ್ರ ಈ ಯಾಗ ನೇತೃತ್ವ ವಹಿಸಿಕೊಂಡಿದ್ದಾರೆ.  ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಸೇರಿದ ಹಲವು ಪೀಠಾಧಿಪತಿಗಳು, ಪುರೋಹಿತರು ಈ ಯಾಗದಲ್ಲಿ ಪಾಲ್ಗೊಂಡಿದ್ದಾರೆ. ರಾಜಶ್ಯಾಮಲ ಯಾಗದ ಜೊತೆಗೆ ಶತಚಂಡಿ ಯಾಗ ಕೂಡಾ ನಡೆಸುತ್ತಿದೆ. ಚಂಡಿಕಾಯಾಗ ಲೋಕ ಕಲ್ಯಾಣಾರ್ಥವಾಗಿ ನಡೆದರೆ, ರಾಜ್‌ ಶ್ಯಾಮಲ ಯಾಗ ಅಧಿಕಾರ ಪಡೆಯುವುದಕ್ಕಾಗಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಸಂಜೆಯೇ 200 ವೈದಿಕರು ಎರ್ರವಳ್ಳಿ ಫಾರ್ಮ್‌ಹೌಸ್‌ಗೆ ಆಗಮಿಸಿದ್ದರು. ಬುಧವಾರ ಬೆಳಗ್ಗೆ  ದೃಢಸಂಕಲ್ಪದೊಂದಿಗೆ ಬೃಹತ್‌ ರಾಜ ಶ್ಯಾಮಲ ಯಾಗವನ್ನು ಆರಂಭಿಸಲಾಯಿತು.  ಎರಡನೇ ದಿನವಾದ ಗುರುವಾರ ವೇದ ಪಾರಾಯಣ, ಹೋಮ ಇತ್ಯಾದಿ ವಿಧಿವಿಧಾನಗಳು ನಡೆಯುತ್ತಿವೆ. ಕೊನೆಯ ದಿನವಾದ ಶುಕ್ರವಾರ ಪೂರ್ಣಾಹುತಿಯೊಂದಿಗೆ ಯಾಗ ಗೊಳ್ಳುತ್ತದೆ.

ಇನ್ನು ಬುಧವಾರವೇ ರಾಜ ಶ್ಯಾಮಲ ಯಾಗದ ಜೊತೆ ಚಂಡಿಕಾಯಾಗ ಕೂಡಾ ನಡೆಸಲಾಗಿದೆ. ಗುರು, ದೇವತಾ ಪ್ರಾತ್ರ, ಮಹಾ ಸಂಕಲ್ಪ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ ಯಾಗಶಾಲಾ ಸಂಸ್ಕಾರ, ಗೋ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ, ಆದಿತ್ಯಾದಿ ನವಗ್ರಹ ಹೋಮ, ನವಾಕ್ಷರಿ ಮೂಲ ಮಂತ್ರ ಜಪ ಅನುಷ್ಠಾನ, ನವಾಕ್ಷರಿ ಮೂಲ ಮಂತ್ರ ಜಪ ಅನುಷ್ಠಾನ, ರಾಹುಪತಿ ತ್ರಯಾಧೀಶನ ಅನುಸ್ಥಾನ ಮಾಡಲಾಯಿತು.

ಇನ್ನು ಸಿಎಂ ಚಂದ್ರಶೇಖರರಾವ್‌  ದಂಪತಿಗಳ ಹಸ್ತದಿಂದ ವೇದ ವಿದ್ವಾಂಸರಿಂದ ಮೋ ಹನಗೌರಿ ಹೋಮ, ಅಘೋರಾಷ್ಟ್ರ ಹೋಮ ಕಾರ್ಯಗಳು, ಚಂಡಿ ಸಪ್ತಶತಿ ಪಾರಾಯಣ, ಚತುರ್ವೇದ ಪಾರಾಯಣ, ಮಹಾಮಂಗಳಾರತಿ, ಮಂತ್ರಪುಷ್ಪಮು, ಅಷ್ಟಾವಧಾನ-ಸೇವೆ ಮತ್ತಿತರ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ಮಾತನಾಡಿರುವ ಸ್ವರೂಪಾನಂದೇಂದ್ರ ಶ್ರೀಗಳು, ತೆಲಂಗಾಣ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಯಾಗ ನಡೆಸಲಾಗುತ್ತಿದೆ.  ರಾಜಶ್ಯಾಮಲ ಯಾಗ ಅತ್ಯಂತ ಶಕ್ತಿಶಾಲಿಯಾಗಿದ್ದು, ತೆಲಂಗಾಣ ರಾಜ್ಯವನ್ನು ಹಸಿರಾಗಿಸಲು ಕೆಸಿಆರ್ ಈ ಯಾಗ ಮಾಡಿಸುತ್ತಿದ್ದಾರೆ ಎಂದರು.

ರಾಜಶ್ಯಾಮಲ ಯಾಗ ರಾಜರು ಹಾಗೂ ಜನಸಾಮಾನ್ಯರನ್ನು ಅನುಗ್ರಹಿಸುವ ದೇವತೆಯಂತೆ. ಈ ಹಿಂದೆ 2018ರಲ್ಲಿ ನಡೆಸಿದ ಯಾಗದ ಫಲವಾಗಿಯೇ ಹೈದರಾಬಾದ್ ಮಹಾನಗರವಾಗಿ ಹೊರಹೊಮ್ಮುತ್ತಿದೆ ಎಂದೂ ಶ್ರೀಗಳು ಹೇಳಿದ್ದಾರೆ. ಅಂದಹಾಗೆ 2015ರಲ್ಲಿಯೇ ತೆಲಂಗಾಣ ರಾಜ್ಯದ ಅಭಿವೃದ್ಧಿಗಾಗಿ ಚಂದ್ರಶೇಖರರಾವ್‌ ಅವರು ಚಂಡಿಕಾ ಯಾಗ ನೆರವೇರಿಸಿದ್ದರು. ಆ ಬಳಿಕ 2018ರಲ್ಲಿ ಎರಡನೇ ಬಾರಿಗೆ, ಚುನಾವಣೆಗೆ ಹೋಗುವ ಮುನ್ನ ರಾಜಶ್ಯಾಮಲ ಯಾಗ ನಡೆಸಲಾಗಿತ್ತು.

 

Share Post