NationalPolitics

ಸಚಿವ ಶಿವಾನಂದ ಪಾಟೀಲ್‌ ಕಾಲಡಿಯಲ್ಲಿ ರಾಶಿ ರಾಶಿ ನೋಟುಗಳು!

ಬೆಂಗಳೂರು; ಆಂದ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆಯುವ ಮದುವೆಗಳಲ್ಲಿ ನೃತ್ಯಗಳು, ಹಣ ಚೆಲ್ಲುವುದು ಮುಂತಾದುವುದು ನಡೆಯುತ್ತಿರುತ್ತವೆ. ಅದೇ ರೀತಿ ಸಚಿವ ಶಿವಾನಂದ ಪಾಟೀಲ್‌ ಪಾಲ್ಗೊಂಡಿದ್ದ ಸಮಾರಂಭದಲ್ಲೂ ರಾಶಿ ರಾಶಿ ನೋಟುಗಳನ್ನು ಚೆಲ್ಲಲಾಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಸಚಿವ ಶಿವಾಂದ ಪಾಟೀಲ್‌ ಅವರು ಹೈದರಾಬಾದ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಮೋಜು ಮಸ್ತಿ ನಡೆದಿದೆ. ಈ ವೇಳೆ ನೋಟುಗಳನ್ನು ರಾಶಿ ರಾಶಿ ಚೆಲ್ಲಲಾಗಿದೆ. ಸಚಿವರು ಆ ನೋಟುಗಳ ರಾಶಿಯ ಮೇಲೆ ಕುಳಿತಿದ್ದಾರೆ. ಇದರ ವಿಡಿಯೋ ಈಗ ವೈರಲ್‌ ಆಗಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರು ಮೋಜು ಮಸ್ತಿ ಮಾಡಿರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Share Post