BengaluruCrime

ಸ್ನೇಹಿತರೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಡ; ಪತಿ ವಿರುದ್ಧ ಪತ್ನಿ ದೂರು

ಬೆಂಗಳೂರು; ಕಟ್ಟಿಕೊಂಡ ಗಂಡನೇ ತನ್ನ ಸ್ನೇಹಿತರ ಜೊತೆ ಮಲಗುವಂತೆ ಒತ್ತಡ ಹೇರುತ್ತಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಹಿಳೆ ಬೆಂಗಳೂರಿನ ಅಮೃತಹಳ್ಳಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ನನ್ನ ಗಂಡ ವಿಕೃತ. ಆತ ತನ್ನ ಸ್ನೇಹಿತರ ಜೊತೆ ನನ್ನನ್ನು ದೈಹಿಕ ಸಂಪರ್ಕ ಬೆಳೆಸುವುಂತೆ ಒತ್ತಡ ಹೇರುತ್ತಿದ್ದಾನೆ. ಆತನ ಮೂವರು ಸ್ನೇಹಿತರನ್ನು ಕರೆತಂದು ಅವರೊಂದಿಗೆ ಮಲಗುವಂತೆ ಹೇಳುತ್ತಾನೆ. ಗಂಡನ ಈ ವಿಕೃತ ಬೇಡಿಕೆಗೆ ನಾನು ಒಪ್ಪಲಿಲ್ಲ. ಇದಕ್ಕಾಗಿ ಆತ ನನ್ನ ಮೇಲೆ ಹಲ್ಲೇ ಮಾಡಿದ್ದಾನೆ. ಮಾನಸಿಕವಾಗಿಯೂ ಹಿಂಸೆ ನೀಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಆರೋಪಿ ಗಂಡ ಮಂಗಳೂರು ಮೂಲದವನು ಎಂದು ತಿಳಿದುಬಂದಿದೆ.  ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share Post