CrimeDistricts

ಸೀದಾ ಮನೆಗೇ ನುಗ್ಗಿಬಿಡ್ತು ಸರ್ಕಾರಿ ಬಸ್‌; ಅಗ್ಗುಂದ ಗ್ರಾಮದಲ್ಲಿ ನಡೆದಿದ್ದೇನು..?

ಹಾಸನ; ಸರ್ಕಾರಿ ಬಸ್‌ಗಳು ಆಗಾಗ ಅವಾಂತರ ಸೃಷ್ಟಿಸುತ್ತಲೇ ಇರುತ್ತವೆ. ಅತಿವೇಗದ ಚಾಲನೆಯಿಂದಾಗಿ ಅಪಘಾತಗಳು ಕೂಡಾ ನಡೆಯುತ್ತಿರುತ್ತವೆ. ಹಾಸನ ಜಿಲ್ಲೆಯಲ್ಲಿ ಕೂಡಾ ಇಂತಹದ್ದೊಂದು ಅವಾಂತರ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ ನೇರವಾಗಿ ಮನೆಯೊಂದಕ್ಕೆ ನುಗ್ಗಿಬಿಟ್ಟಿದೆ.

ಹಾಸನ ಜಿಲ್ಲೆ ಅರಸೀಕರೆ ಬಳಿ ಅಗ್ಗುಂದ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಬಸ್‌ ಅರಸೀಕೆರೆಯಿಂದ ಹುಳಿಯಾರಿಗೆ ತೆರಳುತ್ತಿತ್ತು. ಈ ವೇಳೆ ಅಗ್ಗುಂದ ಗ್ರಾಮದ ಬಳಿ ಬಂದಾಗ ಬಸ್‌ ಚಾಲಕನ ನಿಯಂತ್ರಣ ತಪ್ಪಿದ್ದು, ಮನೆಗೆ ನುಗ್ಗಿದೆ. ಇದರಿಂದಾಗಿ ಮನೆಯ ಗೋಡೆ ಹಾಗೂ ಕಾಂಪೌಂಡ್‌ ನೆಲಕ್ಕುರುಳಿದೆ.

ಘಟನೆಯಲ್ಲಿ ಐದಾರು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಗಾಯಾಳುಗಳನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Share Post