5 ಲಕ್ಷ ಲಂಚಕ್ಕೆ ಐಟಿ ಅಧಿಕಾರಿ ಬೇಡಿಕೆ; ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದ ಭ್ರಷ್ಟ
ಬೆಳಗಾವಿ; ಒಂದು ಕಡೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವಾರು ಮನೆಗಳಲ್ಲಿ ತಡಕಾಡುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ಹೊರಗೆ ತೆಗೆಯುತ್ತಿದ್ದಾರೆ. ಹೀಗಿರುವಾಗಲೇ ಅದಾಯ ತೆರಿಗೆ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿದ್ದಾರೆ. ಬೆಳಗಾವಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬ ಆಭರಣ ಅಂಗಡಿ ಮಾಲೀಕನಿಗೆ ಹಣಕ್ಕೆ ಬೇಡಿಕೆ ಇಟ್ಟು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಹಣ ಸ್ವೀಕರಿಸುವಾಗಲೇ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅವಿನಾಶ ಟೊಪನೆ ಎಂಬ ಅಧಿಕಾರಿಯೇ ಬಲೆಗೆ ಬಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ. ಈತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಐಟಿ ಅಧಿಕಾರಿ ಎಂದು ತಿಳಿದುಬಂದಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪರಶುರಾಮ್ ಬಂಕಾಪುರ ಎನ್ನುವವರಿಗೆ ಸೇರಿದ ಚಿನ್ನದ ಅಂಗಡಿಗೆ ಹೋಗಿ, ಪರಶುರಾಮ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ.
ನೀನು ಮನಿ ಲ್ಯಾಂಡ್ರಿಂಗ್ ಮಾಡ್ತಿದೀಯ. ಅಕ್ರಮ ವ್ಯವಹಾರ ಮಾಡ್ತಾ ಇದ್ದೀಯ ಎಂದು ಹೇಳಿ 5 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ, ಆಭರಣ ಅಂಗಡಿ ಮಾಲೀಕ ಪರಶುರಾಮ್ ಅವರು ಪ್ಲ್ಯಾನ್ ಮಾಡಿ ಪೊಲೀಸರಿಗೆ ರೆಡ್‌ಹ್ಯಾಂಡಾಗಿ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.