CrimeDistricts

ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಯುವಕ

ಧಾರವಾಡ; ದಾಂಡೇಲಿಗೆ ಪ್ರವಾಸಕ್ಕೆಂದು ಕರೆದೊಯ್ದು ವಾಪಸ್‌ ಬಂದ ಮೇಲೆ ಪ್ರಿಯತಮೆಯ ಕುತ್ತಿಗೆ ಹಾಗೂ ಕೈಗೆ ಇರಿದಿದ್ದ ಆರೋಪಿಯನ್ನು ಧಾರವಾಡದಲ್ಲಿ ಬಂಧಿಸಲಾಗಿದೆ. ಬೀಬಿ ನಿಸ್ಬಾ ಡಂಬಳ ಎಂಬಾಕೆಯೇ ತೀವ್ರ ಹಲ್ಲೆಗೊಳಗಾದ ಯುವತಿಯಾಗಿದ್ದು, ಆರೋಪಿ ಇಮಾಮಜಾಫರ್ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ.

ಅಕ್ಟೋಬರ್‌ ಎಂಟರಂದು ಆರೋಪಿ ಇಮಾಮಜಾಫರ್ ದಾಂಡೇಲಿಗೆ ತನ್ನ ಪ್ರಿಯತಮೆ ಬೀಬಿ ನಿಸ್ಬಾಳಬನ್ನು ಕರೆದೊಯ್ದಿದ್ದ. ಅನಂತರ ಇಬ್ಬರ ನಡುವೆ ಗಲಾಟೆಗೆ ಆಗಿದೆ. ಹೀಗಾಗಿ ಆರೋಪಿ ಇಮಾಮಜಾಫರ್ ಕ್ಟೋಬರ್ 8 ರಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಕಟರ್‌ನಿಂದ ಪ್ರಿಯತಮೆಯ ಕುತ್ತಿಗೆ ಹಾಗೂ ಕೈಗೆ ಇರಿದಿದ್ದಾನೆ.

ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧಾರವಾಡ ಶಹರ ಠಾಣೆ ಪೊಲೀಸರು ಯುವತಿ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬೀಬಿ ನಿಸ್ಬಾ ಹಾಗೂ ಆರೋಪಿ ಇಮಾಮಜಾಫರ್‌ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಬೀಬಿ ಬೇರೆ ಯುವಕನ ಜೊತೆ ಮಾತನಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

 

Share Post