BengaluruPolitics

ನಿಗಮ-ಮಂಡಳಿಗಳಿಗೆ ನೇಮಕಕ್ಕೆ ಮೂಡದ ಒಮ್ಮತ; ಸಧ್ಯಕ್ಕೆ ನೇಮಕ ಡೌಟು..!

ಬೆಂಗಳೂರು; ಲೋಕಸಭಾ ಚುನಾವಣೆಗೆ ಮೊದಲು ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿತ್ತು. ಆದ್ರೆ ಒಮ್ಮತ ಮೂಡದ ಕಾರಣದಿಂದಾಗಿ ನೇಮಕ ಸದ್ಯಕ್ಕೆ ಡೌಟು ಎಂದು ಹೇಳಲಾಗುತ್ತಿದೆ. 

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದರು. ಒಂದು ಲಿಸ್ಟ್‌ ಕೂಡಾ ರೆಡಿಯಾಗಿತ್ತು. ನಿಗಮ – ಮಂಡಳಿಗಳಿಗೆ ನೇಮಕ ಮಾಡುವ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲಾಯಿತು. ಆದ್ರೆ ಅರ್ಧದಷ್ಟು ಸ್ಥಾನಗಳನ್ನು ಶಾಸಕರಿಗೆ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಆದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು ನಲವತ್ತರಷ್ಟು ಸ್ಥಾನಗಳನ್ನು ಶಾಸಕರಿಗೆ ಕೊಟ್ಟರೆ, ಕಾರ್ಯಕರ್ತರು ಏನು ಮಾಡೋದು..? ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ನಿಗಮ ಮಂಡಳಿಗಳನ್ನು ಸ್ಥಾನ ಕೊಡೋದಾಗಿ ಭರವಸೆ ನೀಡಿದ್ದರಿಂದ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈಗ ಕೊಡದೇ ಹೋದರೆ ಅವರಿಗೆ ಅಸಮಾಧಾನ ಆಗುತ್ತದೆ ಎಂದಿದ್ದಾರೆ ಎನ್ನಲಾಗಿದೆ.

ಹೀಗೆ ಇಬ್ಬರ ನಡುವೆ ಒಮ್ಮತ ಮೂಡದ ಕಾರಣದಿಂದಾಗಿ ನಿಗಮ-ಮಂಡಳಿಗಳಿಗೆ ನೇಮಕ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 

Share Post