ಅತ್ತಿಬೆಲೆ ದುರಂತದ ಬಳಿಕ ಎಚ್ಚೆತ್ತ ಸರ್ಕಾರ; ಮದುವೆ, ರಾಜಕೀಯ ಸಮಾರಂಭಗಳಿಗೆ ಪಟಾಕಿ ಬ್ಯಾನ್
ಬೆಂಗಳೂರು; ಅತ್ತಿಬೆಲೆ ಪಟಾಕಿ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪಟಾಕಿ ಗೋಡೌನ್, ಮಳಿಗೆ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮದುವೆ, ರಾಜಕೀಯ ಸಮಾರಂಭಗಳಲ್ಲಿ ಪಟಾಕಿ ಬಳಸುವುದನ್ನು ಬ್ಯಾನ್ ಮಾಡಲಾಗುತ್ತದೆ. ಗಣೇಶ ಹಬ್ಬ, ಮೆರವಣಿಗಳಲ್ಲೂ ಪಟಾಕಿ ಹೊಡೆಯುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಅತ್ತಿಬೆಲೆ ಪ್ರಕರಣ ಸಂಬಂಧ ತಹಸೀಲ್ದಾರ್, ಪಿಎಸ್‌ಐ ಹಾಗೂ ಮುಖ್ಯ ಅಗ್ನಿಶಾಮಕ ಅಧಿಕಾರಿ ಸಸ್ಪೆಂಡ್ ಮಾಡಲು ಆದೇಶಿಸಿರುವುದಾಗಿಯೂ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿ, ಎಸ್‌ಪಿಗೆ ನೋಟಿಸ್ ಕೊಡಲು ಸೂಚನೆ ಕೊಟ್ಟಿದ್ದೇನೆ. ರಾಜ್ಯಾಧ್ಯಂತ ತಪಾಸಣೆ ನಡಸುವಂತೆಯೋ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಪಟಾಕಿ ಮಾರಾಟಕ್ಕೆ ಐದು ವರ್ಷದ ಅವಧಿಗೆ ಲೈಸೆನ್ಸ್ ನೀಡಲಾಗುತ್ತಿತ್ತು. ಆದ್ರೆ ಇನ್ಮೇಲೆ ಪ್ರತಿವರ್ಷ ಲೈಸೆನ್ಸ್ ರಿನೀವಲ್ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.