BengaluruScience

ಮಂಗಳಯಾನ-2; ಮಾಡ್ಯೂಲ್ ಸಿದ್ಧಪಡಿಸಿದ ಇಸ್ರೋ

ಬೆಂಗಳೂರು; ಇಸ್ರೋ ನಡೆಸಿದ ಚಂದ್ರಯಾನ ಯಶಸ್ವಿಯಾಗಿದೆ. ಅನಂತರ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಕೂಡಾ ಇಸ್ರೋ ಉಪಗ್ರಹವನ್ನು ಕಳುಹಿಸಿದೆ. ಈ ಬೆನ್ನಲ್ಲೇ ಇಸ್ರೋ ಮತ್ತೊಂದು ಯೋಜನೆಗೆ ಸಿದ್ಧತೆ ನಡೆಸುತ್ತಿದೆ.

9 ವರ್ಷದ ನಂತರ ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಮುಂದಾಗಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು ಗಗನಕ್ಕೆ ಹೊತ್ತೊಯ್ಯುತ್ತದೆ. 2024ರಲ್ಲಿ ಮಂಗಳಯಾನಕ್ಕೆ ಇಸ್ರೋ ಸಿದ್ಧತೆಗಳನ್ನು ಆರಂಭಿಸಿದೆ.

ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬುದರ ಬಗ್ಗೆ ಮಾದರಿ ಸಿದ್ಧಪಡಿಸಿದೆ.

 

Share Post