National

ಕೃಷ್ಣಾ ಟ್ರಿಬ್ಯುನಲ್‌-2 ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ; ಕಾವೇರಿಯಂತೆ ಕೃಷ್ಣ ನದಿ ನೀರು ಹಂಚಿಕೆ ಸಂಬಂಧ ಆಂಧ್ರಪ್ರದೇಶ, ತೆಲಂಗಾಣ ನಡುವೆ ವಿವಾದವಿದೆ. ಈ ಹಿನ್ನೆಲೆಯಲ್ಲಿ ಈ ವಿವಾದ ಪರಿಹರಿಸಲು ಕೃಷ್ಣಾ ಟ್ರಿಬ್ಯುನಲ್‌-2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. 

ಕರ್ನಾಟಕ, ಮಹಾರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶದ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ಮಾಡಿ ಕೃಷ್ಣಾ ನ್ಯಾಯಾಧಿಕರಣ ಆದೇಶ ಹೊರಡಿಸಿತ್ತು. ಆದ್ರೆ ಈಗ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶವಾಗಿದೆ. ಹೀಗಾಗಿ ನೀರು ಮರು ಹಂಚಿಕೆಗೆ ತೆಲಂಗಾಣ ಸುಪ್ರೀಂಕೋರ್ಟ್‌ ಮೊರೆಹೋಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೃಷ್ಣಾ ಟ್ರಿಬ್ಯುನಲ್‌-2 ರಚನೆಗೆ ಒಪ್ಪಿಗೆ ಕೊಟ್ಟಿದೆ.

ಕೃಷ್ಣಾ ನ್ಯಾಯಧಿಕರಣದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ಅವಕಾಶ ನೀಡಿ ಕರ್ನಾಟಕಕ್ಕೆ 911 ಟಿಎಂಸಿ, ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿತ್ತು.

Share Post