CrimeDistricts

ಹಳೆ ವೈಷಮ್ಯದ ಹಿನ್ನೆಲೆ ಗಲಾಟೆ; ಶಿವಮೊಗ್ಗದಲ್ಲಿ ಐವರಿಗೆ ಚಾಕು ಇರಿತ

ಶಿವಮೊಗ್ಗ; ಶಿವಮೊಗ್ಗದಲ್ಲಿ ಕಳೆದ ರಾತ್ರಿ ಎರಡು ಪ್ರತ್ಯೇಕ ಗಲಭೆಗಳು ನಡೆದಿವೆ. ಒಂದು ಗಲಭೆಯಲ್ಲಿ ಐವರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಎಲ್ಲರನ್ನೂ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 

ಕಳೆದ ರಾತ್ರಿ ಶಿವಮೊಗ್ಗದ ದ್ರೌಪದಮ್ಮ ಸರ್ಕಲ್‌ನಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಚಾಕುವಿನಿಂದ ಐವರಿಗೆ ಇರಿಯಲಾಗಿದೆ. ಪವನ್‌ ಹಾಗೂ ಕಿರಣ್‌ ಎಂಬುವವರು ಗುಂಪು ಕಟ್ಟಿಕೊಂಡು ಬಂದು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇನ್ನೊಂದು ಕಡೆ ಗಣೇಶ ಮೆರವಣಿಗೆ ವೇಳೆ ಗಲಾಟೆಯಾಗಿದೆ. ಪಟಾಕಿ ಹಚ್ಚುವ ವಿಚಾರವಾಗಿ ಎರಡು ಕೋಮಿನ ಗುಂಪುಗಳ ನಡುವೆ ದೊಡ್ಡ ವಾಗ್ವಾದ ನಡೆದಿದೆ. ಟ್ಯಾಂಕ್ ಮೊಹಲ್ಲಾ ಪ್ರಾರ್ಥನಾ ಮಂದಿರದ ಬಳಿ ಘಟನೆ ನಡೆದಿದ್ದು, ಮಾತಿನ ಚಕಮಕಿ ಶುರುವಾಗುತ್ತಿದ್ದಂತೆ ಪೊಲೀಸರು ಅದನ್ನು ತಡೆದಿದ್ದಾರೆ.

Share Post