CrimeDistricts

ಮಹಿಳಾ ಸಂಘಟನೆಯಲ್ಲಿ ಪತ್ನಿ ಫುಲ್‌ ಬ್ಯುಸಿ; ಪತ್ನಿ, ಅತ್ತೆಯನ್ನು ಕೊಂದ ವ್ಯಕ್ತಿ

ವಿಜಯಪುರ; ಪತ್ನಿ ಮಕ್ಕಳ ಯೋಗಕ್ಷೇಮ ನೋಡದೇ ಸದಾ ಮಹಿಳಾ ಸಂಘಟನೆಯಲ್ಲಿ ನಿರತಳಾಗಿದ್ದರಿಂದ ಬೇಸತ್ತ ಗಂಡನೊಬ್ಬ ಪತ್ನಿ ಹಾಗೂ ಅತ್ತೆ ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ವಿಜಯಪುರದ ನವಭಾಗ್‌ ಪ್ರದೇಶದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಮೇತ್ರಿ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ. ಈ ಪತ್ನಿ ರೂಪಾ ಮೇತ್ರಿ ಹಾಗೂ ಆಕೆಯ ತಾಯಿ ಕಲ್ಲವ್ವಳನ್ನು ಕೊಲೆ ಮಾಡಿದ್ದಾನೆ. ಇಬ್ಬರೂ ಮಲಗಿದ್ದಾಗ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿ ಪತ್ನಿ, ಅತ್ತೆ ಹಾಗೂ ಮೂವರು ಮಕ್ಕಳೊಂದಿಗೆ ನವಭಾಗ್‌ ಪ್ರದೇಶದ ಭಗವಾನ್‌ ಎಂಬುವವರ ಮನೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಪತ್ನಿ ರೂಪಾ ಮೇತ್ರಿ ಅವರು ಮಹಿಳಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಯಾವಾಗಲೂ ಮಹಿಳಾ ಸಂಘಟನೆ ಕೆಲಸದ ಮೇಲೆಯೇ ಮನೆಯಿಂದ ಹೊರಗೆ ಇರುತ್ತಿದ್ದರಂತೆ. ಮನೆಯಲ್ಲಿ ಯಾವುದೇ ಕೆಲಸ ಮಾಡದೇ, ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಂತೆ. ಇದರಿಂದ ಇತಿ ಮಲ್ಲಿಕಾರ್ಜುನ್‌ ಬೇಸತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಮನನೊಂದ ಮಲ್ಲಿಕಾರ್ಜುನ್‌, ಪತ್ನಿ ಹಾಗೂ ಅತ್ತೆಯನ್ನೊ ಕೊಲೆ ಮಾಡಿದ್ದಾನೆ. ನಂತರ ಗಾಂಧಿಚೌಕ್‌ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

 

Share Post