ಫೋನ್‌ನಲ್ಲಿ ಮಾತಾಡ್ತಾ ಮಾತ್ರೆ ಅಂದುಕೊಂಡು ಏರ್‌ಪಾಡ್ ನುಂಗಿದ್ದ ಮಹಿಳೆ..!
ನ್ಯೂಯಾರ್ಕ್; ಮೊಬೈಲ್ ನಲ್ಲಿ ಮಾತನಾಡುವಾಗ ಜನ ಎಲ್ಲವನ್ನೂ ಮರೆತುಬಿಟ್ಟಿರುತ್ತಾರೆ. ಮೊಬೈಲ್‌ನಲ್ಲೇ ಮೈಮರೆತಿರುತ್ತಾರೆ. ಇಂತಹ ಸಮಯದಲ್ಲಿ ಹಲವು ಎಡವಟ್ಟು ಕೆಲಸಗಳನ್ನು ಮಾಡಿ ಸಂಕಷ್ಟಕ್ಕೆ ಸಿಲುಕಿದ ಘಟನೆಗಳನ್ನು ನಾವು ಈಗಾಗಲೇ ಸಾಕಷ್ಟು ನೋಡಿದ್ದೇವೆ. ಇದೀಗ ಅಮೆರಿಕದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ವಿಟಮಿನ್ ಮಾತ್ರೆ ಎಂದುಕೊಂಡು ಮಹಿಳೆಯೊಬ್ಬರು ಏರ್ ಪಾಡ್ ನುಂಗಿಬಿಟ್ಟಿದ್ದಾಳೆ.
ಹೌದು, ಅಮೆರಿಕದ ನಗರವೊಂದರಲ್ಲಿ 52 ವರ್ಷದ ಮಹಿಳೆಯೊಬ್ಬರು ವಾಕಿಂಗ್‌ಗೆ ತೆರಳಿದ್ದರು. ಇದೇ ವೇಳೆ ಮೊಬೈಲ್‌ನಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಆಕೆ ವಿಟಮಿನ್ ಟ್ಯಾಬ್ಲೆಟ್ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ನಿಂದ ಮಾತ್ರೆ ತೆಗೆಯಲು ಹೋಗಿದ್ದಾಳೆ. ಫೋನ್‌ನಲ್ಲಿ ಮೈಮರೆತಿದ್ದ ಆಕೆ, ಬ್ಯಾಗ್‌ನಲ್ಲಿ ಕೈಗೆ ಸಿಕ್ಕಿದ್ದನ್ನೇ ಮಾತ್ರೆ ಎಂದುಕೊಂಡು ನುಂಗಿಬಿಟ್ಟಿದ್ದಾಳೆ. ಅನಂತರ ತಾನು ನುಂಗಿದ್ದು ಮಾತ್ರೆ ಅನ್ನೋದು ಅರಿವಾಗಿದೆ. ಪರಿಶೀಲಿಸಿದಾಗ ಅದು ಮಾತ್ರೆ ಅಲ್ಲ, ಏರ್ ಪಾಡ್ ಅನ್ನೋದು ಖಾತ್ರಿಯಾಗಿದೆ.
ಕೂಡಲೇ ಆಕೆ ವೈದ್ಯ ಬಳಿ ಹೋಗಿ ನುಂಗಿದ್ದ ಏರ್‌ಪಾಡ್‌ನ್ನು ತೆಗೆಸಿದ್ದಾಳೆ. ಇದರಿಂದಾಗಿ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಈ ಬಗ್ಗೆ ಮಹಿಳೆಯೇ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.