ಡಿಕೆ ಬ್ರದರ್ಸ್ ಮೆಗಾ ಆಪರೇಷನ್; ಕಾಂಗ್ರೆಸ್ ಸೇರಲಿದ್ದಾರೆ ಆರ್.ಅಶೋಕ್ ಬೆಂಬಲಿಗರು..!
ಬೆಂಗಳೂರು; ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಮೆಗಾ ಆಪರೇಷನ್ ಶುರು ಮಾಡಿದ್ದಾರೆ. ಈಗಾಗಲೇ ಬಿಜೆಪಿ ಶಾಸಕರಾದ ಭೈರತಿ ಬಸವರಾಜು ಹಾಗೂ ಎಸ್.ಟಿ.ಸೋಮಶೇಖರ್ ಅವರ ಹಲವಾರು ಬೆಂಬಲಿಗರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರ ನಡುವೆ ಈಗ ಒಂದು ಮೆಗಾ ಆಪರೇಷನ್ ಆಗಿದೆ. ಮಾಜಿ ಸಚಿವ ಆರ್.ಅಶೋಕ್ ಅವರ ಹದಿನೈದಕ್ಕೂ ಹೆಚ್ಚು ಬೆಂಬಲಿಗರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ವೇದಿಕೆ ರೆಡಿಯಾಗಿದೆ.
ಸೆಪ್ಟೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಅದರಲ್ಲೂ ಆರ್.ಅಶೋಕ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮುಖಂಡರೇ ಕಾಂಗ್ರೆಸ್ಗೆ ಪಕ್ಷಾಂತರವಾಗುತ್ತಿರುವುದು ಗಮನಾರ್ಹ ಸಂಗತಿ. ಮಾಜಿ ಕಾರ್ಪೊರೇಟರ್ಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು ಕೂಡಾ ಕಾಂಗ್ರೆಸ್ ಸೇರುತ್ತಿದ್ದಾರೆ.
ಯಾರ್ಯಾರು ಕಾಂಗ್ರೆಸ್ ಸೇರ್ತಿದ್ದಾರೆ..?
1. ಎಲ್. ಶ್ರೀನಿವಾಸ್- ಮಾಜಿ ಉಪ ಮಹಾಪೌರರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು
2. ಆಂಜಿನಪ್ಪ – ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು
3. ಶೋಭ ಆಂಜಿನಪ್ಪ-ಮಾಜಿ ಬಿಬಿಎಂಪಿ ಸದಸ್ಯರು
4.ಹೆಚ್. ನಾರಾಯಣ್- ಮಾಜಿ ಬಿಬಿಎಂಪಿ ಸದಸ್ಯರು
5. ವೆಂಕಟಸ್ವಾಮಿ ನಾಯ್ಡು- ಮಾಜಿ ಪಾಲಿಕೆ ಸದಸ್ಯರು
6. ಹೆಚ್. ಸುರೇಶ್- ಮಾಜಿ ಪಾಲಿಕೆ ಸದಸ್ಯರು
7. ಲಕ್ಷ್ಮಿ ಸುರೇಶ್- ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು
8. ರಂಗರಾಮೇಗೌಡ್ರು (ಬಿ.ಆರ್. ರಾಮು) ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ
9. ಪ್ರಸಾದ್ ಬಾಬು ಅಲಿಯಾಸ್ ಕಬಡ್ಡಿ ಬಾಬು- ಜಿಡಿಎಸ್ ಮುಖಂಡ
10. ಪವನ್-ಬಿಜೆಪಿ ಮುಖಂಡ
11. ಸುಪ್ರಿಯ ಶೇಖರ್- ಬಿಬಿಎಂಪಿ ಮಾಜಿ ಸದಸ್ಯರು
12. ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು