ಖಾಸಗಿ ಸಾರಿಗೆ ನೌಕರ ಮುಷ್ಕರ; ಬೀದಿಗಿಳಿಯಲಿಲ್ಲ ಎಲ್ಲೋ ಬೋರ್ಡ್ ವಾಹನಗಳು
ಬೆಂಗಳೂರು; ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ ನಡೆಯುತ್ತಿದೆ. ಯಾವುದೇ ಖಾಸಗಿ ಸಾರಿಗೆ ವಾಹನಗಳು ರಸ್ತೆಗೊಳಿದಿಲ್ಲ. ಹೀಗಾಗಿ, ಕ್ಯಾಬ್, ಆಟೋದಲ್ಲಿ ಓಡಾಡುವವರಿಗೆ ತೊಂದರೆಯಾಗಿದೆ. ಬೆಂಗಳೂರಿನಾದ್ಯಂತ ಬಹುತೇಕ ಈ ಮುಷ್ಕರ ಬೆಂಬಲ ಸಿಕ್ಕಿದೆ. ಕೆಲವೊಂದು ಕಡೆ ಆಟೋಗಳವರು ಮುಷ್ಕರ ಲೆಕ್ಕಿಸದೇ ಓಡಿಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮೊಟ್ಟೆ ಎಸೆದಿದ್ದು ನಡೆದಿದೆ.
ಮಡಿವಾಳದಿಂದ ಫ್ರೀಡಂಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಆಟೋ ಹಾಗೂ ಕ್ಯಾಬ್ ಚಾಲಕರ ಹಲವು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆನೆಕಲ್‌ನ ಅತ್ತಿಬೆಲೆ ಗಡಿಭಾಗದಲ್ಲಿ ವಾಹನಗಳನ್ನ ತಡೆದು ವಾಪಸ್ ಕಳುಹಿಸಿದ ಘಟನೆಗಳು ನಡೆದಿವೆ. ಈ ವೇಳೆ ಗೊಂದಲದ ವಾತಾವರಣ ಉಂಟಾದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನಚಕಮಕಿ ಕೂಡಾ ನಡೆದಿದೆ. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ರಿಪೇಯ್ಡ್ ಆಟೋ, ಕ್ಯಾಬ್ ಚಾಲಕರು ಕೂಡಾ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ರೈಲಿನಲ್ಲಿ ಬಂದು ಖಾಸಗಿ ಸಾರಿಗೆ ಬಳಸುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ರಸ್ತೆಗಿಳಿದ ಕ್ಯಾಬ್ಗೆ ಚಾಲಕರಿಗೆ ಮೊಟ್ಟೆ ಎಸೆದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.