ಜನತಾ ರೈತ ಸಂಘದ ಜಿಲ್ಲಾ ಕಚೇರಿ ಉದ್ಘಾಟನೆ
ಬೆಂಗಳೂರು: ಜನತಾ ರೈತ ಸಂಘದ ಕಚೇರಿಯನ್ನು ರಾಮಮೂರ್ತಿನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ಗುರುವಾರ ಆರಂಭಿಸಲಾಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಈರೇಗೌಡ, ಉಪಾಧ್ಯಕ್ಷ ಹಾಗು ಖಜಾಂಚಿ ಶ್ರೀನಿವಾಸ್ ಸುಬ್ಬು, ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ
ಕಚೇರಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಈರೇಗೌಡ, ದೇಶದಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು. ರೈತರ ಬಗ್ಗೆ ಗಮನ ಹರಿಸದ ಮೋದಿಯವರು ಮುಂದಿನ ಚುನಾವಣೆಯಲ್ಲಿ ರೈತರ ವಿರೋಧ ಎದುರಿಸಬೇಕಾಗುತ್ತದೆ. ರೈತರ ಬೆಳೆಗಳಿಗೆ ಯೋಗ್ಯ ಬೆಲೆಗಾಗಿ ಯಾರ ವಿರುದ್ಧವೂ ನಾವು ಹೋರಾಟ ನಡೆಸುತ್ತೇವೆ ಎಂದರು.
ಈ ವೇಳೆ ಮಾತನಾಡಿದ ಜನತಾ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಸುಬ್ಬು, ರಾಜಧಾನಿ ಬೆಂಗಳೂರಿನಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೂಕ್ತ ಸ್ಥಳವಿರಲಿಲ್ಲ. ಈಗ ಕಚೇರಿ ಆರಂಭಿಸಿರುವುದರಿಂದ ರೈತರು ನಮ್ಮನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. ಯಾವುದೇ ಸಂದರ್ಭದಲ್ಲಿ ರೈತರು ಕಚೇರಿಗೆ ಬಂದು ಅವರ ಸಮಸ್ಯೆ ಹೇಳಿಕೊಳ್ಳಬಹುದು. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳಿಗೆ ಸರ್ಕಾರದ ಮೂಲಕ ಪರಿಹಾರ ಒದಗಿಸಿಕೊಡುವುದು ಜನತಾಚ ರೈತ ಸಂಘದ ಮುಖ್ಯ ಗುರಿ. ರೈತರು ಹೊಸ ಕಚೇರಿಗೆ ಬಂದು ಅವರ ದೂರು ದುಮ್ಮಾನ ತಿಳಿಸಬಹುದು ಎಂದರು.
ಈ ವೇಳೆ ಪದಾಧಿಕಾರಿಗಳಾದ ರಾಧಾ ಚಂದ್ರಶೇಖರ್, ಜಯಂತಿ, ಶಿವಶಂಕರಗೌಡ, ಮೋಹನ್, ಸೊಣ್ಣೇಗೌಡ, ರವೀಂದ್ರ ಇನ್ನಿತರರು ಹಾಜರಿದ್ದರು.