DistrictsEconomy

ನಂಜನಗೂಡು ಶ್ರೀಕಂಠೇಶ್ವರನಿಗೆ ಕೋಟಿ ಕೋಟಿ ಕಾಣಿಕೆ; ಈ ತಿಂಗಳು 1.69 ಕೋಟಿ ರೂಪಾಯಿ ಸಂಗ್ರಹ

ಮೈಸೂರು; ಮೈಸೂರು ಜಿಲ್ಲೆ ನಂಜನಗUಡು ನಂಜುಂಡೇಶ್ವರನಿಗೆ ಕೋಟಿ ಕೋಟಿ ಕಾಣಿಕೆ ಹರಿದುಬಂದಿದೆ. ಈ ತಿಂಗಳು ದೇಗುಲದ 34 ಹುಂಡಿಗಳು ಎಣಿಕೆ ಮಾಡಲಾಗಿದ್ದು, ಇದರಲ್ಲಿ ಸುಮಾರು 1 ಕೋಟಿ 68 ಲಕ್ಷದ 75 ಸಾವಿರದ 992 ರೂಪಾಯಿ ಸಂಗ್ರಹವಾಗಿದೆ. ಜೊತೆಗೆ 88 ಗ್ರಾಂ 640 ಮಿಲಿ ಚಿನ್ನ, ಬೆಳ್ಳಿ 4 ಕೆ ಜಿ 450 ಗ್ರಾಂ ಸಂಗ್ರಹವಾಗಿದೆ.

ಕಳೆದ ತಿಂಗಳು 12 ರಂದು ಏಣಿಕೆ ಕಾರ್ಯದಲ್ಲಿ 1,77,08,710 ರೂಪಾಯಿ ನಗದು ಸಂಗ್ರಹವಾಗಿತ್ತು. ಇಂದಿನ ಏಣಿಕೆ ಕಾರ್ಯದಲ್ಲಿ 34 ಹುಂಡಿಗಳಲ್ಲಿ 1,68,75,992 ರೂಗಳು ಸಂಗ್ರಹವಾಗಿದೆ,  ಏಣಿಕೆ ಕಾರ್ಯಕ್ಕೆ ಮಹಿಳಾ ಸಂಘಗಳ 250 ಸದಸ್ಯರುಗಳನ್ನು ಬಳಸಿಕೊಳಲಾಯಿತ್ತು. ಬ್ಯಾಂಕ್ ಅಪ್ ಬರೋಡಾ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿತ್ತು.

Share Post